ಗರ್ಭದಲ್ಲಿರುವ ಮಗುವಿನಲ್ಲಿ ಮತ್ತೊಂದು ಭ್ರೂಣ ಪತ್ತೆ; Foetus inside foetus ಕುರಿತು ವೈದ್ಯರು ಹೇಳಿದ್ದಿಷ್ಟು

X Ray
Published on

ಮುಂಬೈ: ಅಪರೂಪದ ಘಟನೆಯೊಂದರಲ್ಲಿ ಗರ್ಭಿಣಿಯ ಗರ್ಭದಲ್ಲಿರುವ ಮಗುವಿನ ಹೊಟ್ಟೆಯಲ್ಲಿ ಭ್ರೂಣ (Foetus inside foetus) ಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು ವೈದ್ಯರಲ್ಲಿ ಅಚ್ಚರಿ ಮೂಡಿಸಿದೆ. ಈ ಅಪರೂಪದ ಘಟನೆ ಮಹಾರಾಷ್ಟ್ರದ ಬುಲ್ದಾನದಲ್ಲಿ ನಡೆದಿದ್ದು, ಭಾರತದಲ್ಲಿ ಇಲ್ಲಿಯವರೆಗೂ 15-20 ಪ್ರಕರಣಗಳು ವರದಿಯಾಗಿವೆ.

32 ವರ್ಷದ ಗರ್ಭಿಣಿ ಮಹಿಳೆಯೊಬ್ಬರು ಪರೀಕ್ಷೆ ಮಾಡಿಸಲು ಜಿಲ್ಲಾಸ್ಪತ್ರೆಗೆ ಹೋಗಿದ್ದಾರೆ. ಅದರಂತೆ ವೈದ್ಯರು ಮಹಿಳೆಗೆ ಸೋನೋಗ್ರಾಫಿ ಪರೀಕ್ಷೆ ನಡೆಸಿದ್ದು, ಈ ವೇಳೆ ಗರ್ಭದಲ್ಲಿರುವ ಮಗುವಿನ ಹೊಟ್ಟೆಯಲ್ಲಿ ಭ್ರೂಣ (Foetus inside foetus) ಪತ್ತೆಯಾಗಿದೆ.

X Ray

ಈ ಕುರಿತು ಮಾತನಾಡಿರುವ ಜಿಲ್ಲಾಸ್ಪತ್ರೆಯ ಪ್ರಸೂತಿ ತಜ್ಞ ಡಾ. ಪ್ರಸಾದ್ ಅಗರ್ವಾಲ್​, ಆರಂಭದಲ್ಲಿ ಇದನ್ನು ಕಂಡಾಗ ಒಂದು ಕ್ಷಣ ಆಶ್ಚರ್ಯಚಕಿತನಾಗಿ ಮತ್ತೊಮ್ಮೆ ಪರಿಶೀಲಿಸಿದೆ. ಗರ್ಭದಲ್ಲಿರುವ ಮಗುವಿನಲ್ಲಿ ಭ್ರೂಣ ಇರುವುದು (Foetus inside foetus) ಅತಿ ಅಪರೂಪದ ಘಟನೆಯಾಗಿದೆ. ಐದು ಲಕ್ಷದಲ್ಲಿ ಒಬ್ಬರಿಗೆ ಈ ರೀತಿ ಕಂಡುಬರುತ್ತದೆ. ಜಗತ್ತಿನಲ್ಲಿ ಈವರೆಗೆ 200 ಈ ರೀತಿಯ ಪ್ರಕರಣ ಪತ್ತೆಯಾಗಿದೆ. ಅದೂ ಹೆರಿಗೆಯ ಬಳಿಕ ಗೊತ್ತಾಗಿದೆ. ಭಾರತದಲ್ಲೇ 10–25 ಪ್ರಕರಣಗಳು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಇದು ಬಹಳ ಅಪರೂರ ಘಟನೆಯಾಗಿದ್ದು, ಈ ಹಿಂದೆ ಸೋನೋಗ್ರಾಫಿ ಮಾಡಿದಾಗ ಕಂಡು ಬಂದಿರಲಿಲ್ಲ. ಯಾರೂ ಊಹಿಸಲೂ ಸಾಧ್ಯವಿಲ್ಲ. ಹಾಗಾಗಿ, ನಾನು ಒಂದೆರಡು ವೈದ್ಯರಿಂದ ವಿವರವಾದ ಅಧ್ಯಯನವನ್ನು ಮಾಡಿದ್ದೇನೆ ಮತ್ತು ಅದನ್ನು ಖಚಿತಪಡಿಸಿದೆ. ಮಹಿಳೆಗೆ ಸಾಮಾನ್ಯ ಸರ್ಜರಿಯಾಗುವ ಸಾಧ್ಯತೆಯಿದ್ದು, ಜನನದ ನಂತರ ಮಗುವಿಗೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ ಎಂದು ಜಿಲ್ಲಾಸ್ಪತ್ರೆಯ ಪ್ರಸೂತಿ ತಜ್ಞ ಡಾ. ಪ್ರಸಾದ್ ಅಗರ್ವಾಲ್ ತಿಳಿಸಿದ್ಧಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net