

ಏಡ್ಸ್ ನಿಯಂತ್ರಣ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ
ಹೊಸಪೇಟೆ: ವಿದ್ಯಾರ್ಥಿಗಳು ಕಲಿಕಾಭ್ಯಾಸದ ಜೊತೆಜೊತೆಗೆ ಕ್ರೀಡೆಯತ್ತ ಗಮನ ಹರಿಸಿ ಬೌದ್ಧಿಕ ಮತ್ತು ದೈಹಿಕ ಶಕ್ತಿ ರೂಪಿಸಿಕೊಳ್ಳಬೇಕು ಎಂದು ಶಾಸಕ ಹೆಚ್.ಆರ್.ಗವಿಯಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಇಲಾಖೆ, ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಮತ್ತು ಯುವಜನ ಸಬಲೀ ಕರಣ, ಕ್ರೀಡಾ ಇಲಾಖೆ, ವಿಜಯನಗರ ಕಾಲೇಜು ಸಹಯೋಗದೊಂದಿಗೆ ಸೋಮವಾರ ಎಚ್‌ಐವಿ, ಏಡ್ಸ್ ನಿಯಂತ್ರಣ, ಜಾಗೃತಿಗಾಗಿ ಹಮ್ಮಿಕೊಂಡಿದ್ದ ಯುವಜನೋತ್ಸವ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳಲ್ಲಿ ಆರೋಗ್ಯದ ಮೇಲೆ ಕಾಳಜಿ ಹಾಗೂ ಮಾರಕ ರೋಗಗಳ ಕುರಿತು ಜಾಗೃತಿ ಅತ್ಯವಶ್ಯಕ ವಾಗಿರುತ್ತದೆ. ತಾವು ಜಾಗೃತರಾಗುವುದರ ಜತೆಗೆ ಇತರರಲ್ಲೂ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್. ಮಾತನಾಡಿ, ಈ ಹಿಂದೆ ಹಿಂದುಳಿದ ರಾಷ್ಟçಗಳಲ್ಲಿ ಎಚ್‌ಐವಿ ಹರಡುತ್ತದೆ ಎಂಬ ಕಳಂಕ ಇತ್ತು. ಹೆಚ್ಚಿನ ಜಾಗೃತಿ ಹಾಗೂ ನಿಯಂತ್ರಣ ಸಾಧನಗಳ ಬಳಕೆಯಿಂದ ರೋಗ ಹಂತಹAತವಾಗಿ ಕಡಿಮೆಯಾಗುತ್ತಿದೆ. ಈ ಬಗ್ಗೆ
ವಿದ್ಯಾರ್ಥಿಗಳು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕೇಂದ್ರ ಹೊಸಪೇಟೆ ತಾಲ್ಲೂಕು ಸೇರಿದಂತೆ ಬಳ್ಳಾರಿ-ವಿಜಯನಗರ ಜಿಲ್ಲೆಗಳ ವಿವಿಧ ತಾಲ್ಲೂಕಿನ ವಿದ್ಯಾರ್ಥಿಗಳು ಮ್ಯಾರಥಾನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಿಜಯನಗರ ಕಾಲೇಜು ಬಳಿಯಿಂದ ಆರಂಭಗೊAಡ ಮ್ಯಾರಥಾನ್ ಸ್ಪರ್ಧೆ ಮಾರ್ಕಂಡೇಶ್ವರ ದೇವಸ್ಥಾನ ರಸ್ತೆ, ವಾಲ್ಮೀಕಿ ವೃತ್ತ, ಮದಕರಿನಾಯಕ ವೃತ್ತ, ಗಾಂಧಿ ಚೌಕ್, ಪುಣ್ಯಮೂರ್ತಿ ವೃತ್ತ, ರೈಲ್ವೆ ನಿಲ್ದಾಣ ರಸ್ತೆ, ಕನಕದಾಸ ವೃತ್ತ, ಚಿತ್ತವಾಡ್ಗಿ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಬಂದು ಪುನೀತ್ ರಾಜ್‌ಕುಮಾರ್ ವೃತ್ತದ ಬಳಿ ಕೊನೆಗೊಂಡಿತು. ೫ ಕಿಮೀ. ದೂರದ ಮ್ಯಾರಥಾನ್ ಸ್ಪರ್ಧೆಯಲ್ಲಿ ೧೨೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ವಿಜೇತರಿಗೆ ಬಹುಮಾನ ವಿತರಣೆ:
೫ ಕಿಮೀ. ಮಾರ್ಗದ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಚನ್ನಕೇಶವ(ಪ್ರಥಮ), ತಿಪ್ಪೇಶ(ದ್ವಿತೀಯ) ಹಾಗೂ ವಿನಾಯಕ (ತೃತೀಯ) ಸ್ಥಾನ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಸಂಗೀತ(ಪ್ರಥಮ), ಎನ್.ಪವಿತ್ರ(ದ್ವಿತೀಯ) ಹಾಗೂ ಸುಮಾ (ತೃತೀಯ) ಸ್ಥಾನದಲ್ಲಿ ಗುರಿ ತಲುಪಿದರು. ವಿಜೇತರಾದ ಪ್ರಥಮ ೫ ಸಾವಿರ ರೂ., ದ್ವಿತೀಯ ೩.೫ ಸಾವಿರ ರೂ. ಹಾಗೂ ತೃತೀಯ ಸ್ಥಾನ ಗಳಿಸಿದವರಿಗೆ ೨ ಸಾವಿರ ರೂ. ನಗದು ಮತ್ತು ಪ್ರಮಾಣಪತ್ರ ನೀಡಲಾಯಿತು. ಸಮಾಧಾನಕರ ಬಹುಮಾನ ಪಡೆದ ೭ ಜನ ವಿದ್ಯಾರ್ಥಿಗಳಿಗೆ ತಲಾ ೧ ಸಾವಿರ ರೂ. ನಗದು, ಪ್ರಮಾಣ ಪತ್ರ ವಿತರಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ್ ನಾಯ್ಕ, ವೈದ್ಯಾಧಿಕಾರಿಗಳಾದ ಡಾ.ಭಾಸ್ಕರ್, ಡಾ.ಸೋಮಶೇಖರ್, ಡಾ.ಜಗದೀಶ್ ಪಾಟ್ನೆ, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಇದ್ದರು.