ಬೀಜ ಸಂರಕ್ಷಣೆ, ಶೇಖರಣೆಯತ್ತ ಗಮನಹರಿಸಿ

SUTTUR
ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
Published on

ಸುತ್ತೂರು: ದ್ವಿದಳ ಧಾನ್ಯಗಳ ಬೀಜೋತ್ಪಾದನೆಯಲ್ಲಿ ಉದ್ದು ಎಲ್‌ಬಿಜಿ 791 ಹಾಗೂ ಅಲಸಂದೆ ಕೆಬಿಸಿ 9 ಹೊಸ ತಳಿಗಳ ಬೀಜೋತ್ಪಾದನೆಗೆ ಅವಕಾಶವಿದೆ ಎಂದು ಕೆವಿಕೆ ಪ್ರಭಾರ ಹಿರಿಯ ವಿಜ್ಞಾನಿ ಎಚ್.ವಿ.ದಿವ್ಯಾ ತಿಳಿಸಿದರು.

ರಾಷ್ಟ್ರೀಯ ಬೀಜ ನಿಗಮದ ಕಾರ್ಯಚಟುವಟಿಕೆ, ಕೆವಿಕೆಯಲ್ಲಿ ಬೀಜೋತ್ಪಾದನೆಗೆ ಇರುವ ಅವಕಾಶಗಳ ಕುರಿತು ರಾಷ್ಟ್ರೀಯ ಬೀಜ ನಿಗಮ ಹಾಗೂ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಇಲ್ಲಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆವಿಕೆ ಕಾರ್ಯಚಟುವಟಿಕೆ, ಇಲ್ಲಿ ದೊರಕುವ ಸೌಲಭ್ಯ, ಬೀಜ ಸಂರಕ್ಷಣೆ, ಶೇಖರಣೆ ಬಗ್ಗೆ ವಿಶೇಷ ಗಮನಹರಿಸುವುದು ಅತ್ಯಗತ್ಯ ಎಂದರು.

ರಾಷ್ಟ್ರೀಯ ಬೀಜ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ ಅರವಿಂದಕುಮಾರ್ ಚೌಹಾನ್ ಕಾರ್ಯಕ್ರಮ ಉದ್ಘಾಟಿಸಿದರು. ಕ್ಷೇತ್ರೀಯ ವ್ಯವಸ್ಥಾಪಕ ಸುಬ್ಬೀರೆಡ್ಡಿ, ಕೆವಿಕೆಯ ಪಶುವಿಜ್ಞಾನಿ ಡಾ.ರಕ್ಷಿತ್‌ರಾಜ್, ರಾಷ್ಟ್ರೀಯ ಬೀಜ ನಿಗಮದ ಮಾರುಕಟ್ಟೆ ಉಸ್ತುವಾರಿ ಅಧಿಕಾರಿ ರೇಣುಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net