ಶಿವಮೊಗ್ಗದಲ್ಲಿ ಹಾರುವ ಹಾವು ಪತ್ತೆ

FLYING SNAKE
ಶಿವಮೊಗ್ಗದಲ್ಲಿ ಪತ್ತೆಯಾದ ಹಾರುವ ಹಾವು.
Published on

ಶಿವಮೊಗ್ಗ: ಹಾವುಗಳ ಜಾತಿಯಲ್ಲೇ ವಿಶೇಷವಾದ ಹಾರುವ ಹಾವೊಂದು ಬುಧವಾರ ಕುವೆಂಪು ವಿಶ್ವವಿದ್ಯಾಲಯದ ನಗರ ಕಚೇರಿಯಲ್ಲಿ ಪತ್ತೆಯಾಗಿದೆ.

ನಗರದ ಎಂಆರ್‌ಎಸ್ ವೃತ್ತದ ಕುವೆಂಪು ವಿವಿಯ ನಗರ ಕಚೇರಿಯಲ್ಲಿ ಹಾವು ಕಾಣಿಸಿಕೊಂಡಿದ್ದು ಅಲ್ಲಿನ ಸಿಬ್ಬಂದಿ ಉರಗ ರಕ್ಷಕ ಸ್ನೇಕ್ ವಿಕ್ಕಿ ಮತ್ತು ಉರಗ ತಜ್ಞ ಜಯಂತ ಬಾಬು ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಇಬ್ಬರೂ ಹಾವನ್ನು ಸೆರೆಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಇದು ಉರಗ ಜಾತಿಯಲ್ಲಿ ವಿಶೇಷ ಮತ್ತು ಆಕರ್ಷಣೀಯವಾದದ್ದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net