ಮುಳ್ಳಯ್ಯನಗಿರಿಯಲ್ಲಿ ರಾಷ್ಟ್ರಧ್ವಜ ಹಾರಾಟ

thiranga
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿಯಲ್ಲಿ ಭಾರತೀಯ ಸೈನ್ಯದ ತಂಡ ಸದಸ್ಯರು ರಾಷ್ಟ್ರಧ್ವಜ ಹಾರಿಸಿದರು.
Published on

ಚಿಕ್ಕಮಗಳೂರು: ದೇಶದ ಅತಿ ಎತ್ತರದ ಶಿಖರಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಸಂಕಲ್ಪ ತೊಟ್ಟಿರುವ ರಾಷ್ಟ್ರೀಯ ಪರ್ವತಾರೋಹಣ ಮತ್ತು ಸಾಹಸ ಕ್ರೀಡೆಗಳ ಸಂಸ್ಥೆ ಅಧೀನದ ಭಾರತೀಯ ಸೈನ್ಯದ ತಂಡ ಸದಸ್ಯರು ಮುಳ್ಳಯ್ಯನಗಿರಿ ಏರಿ ರಾಷ್ಟ್ರಧ್ವಜ ಹಾರಿಸಿದರು. ಕರ್ನಲ್ ರಣವೀರ್ ಸಿಂಗ್ ಜಮ್ಹಾಲ್ ನೇತೃತ್ವದ ತಂಡದಲ್ಲಿ ಒಟ್ಟು 14 ಮಂದಿ ಸದಸ್ಯರು ದೇಶದ 17 ರಾಜ್ಯಗಳಲ್ಲಿ ಈಗಾಗಲೇ ಗುರಿ ಸಾಧಿಸಿದ್ದು ಮುಳ್ಳಯ್ಯನಗಿರಿಯಲ್ಲಿ ಧ್ವಜ ಹಾರಿಸುವ ಮೂಲಕ 18ನೇ ರಾಜ್ಯದ ಎತ್ತರದ ಪ್ರದೇಶದಲ್ಲಿ ಧ್ವಜ ಹಾರಿಸಿದ್ದಾರೆ. ಶನಿವಾರ ಸಂಜೆ ಮುಳ್ಳಯ್ಯನಗಿರಿ ಏರಿದ ತಂಡ ಧ್ವಜ ಹಾರಿಸಿ ಗಿರಿಶ್ರೇಣಿಯ ಸೊಬಗು ಕಂಡು ಸಂತಸ ವ್ಯಕ್ತಪಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net