ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್; ರಾಹುಲ್ ಗಾಂಧಿ ವಿರುದ್ಧ ಶೋಭಾ ಕರಂದ್ಲಾಜೆ ದೂರು

Rahul Smrithi Shobha
Published on

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಸಂಸದ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಸ್ಪೀಕರ್​ಗೆ ದೂರು ನೀಡಿದ್ದಾರೆ.

ಈ ಕುರಿತು ಇಂದು ನವದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶೋಭಾ ಕರಂದ್ಲಾಜೆ ಮಾಹಿತಿಯನ್ನು ಹಂಚಿಕೊಂಡರು. ಇವತ್ತು ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ತಮ್ಮ ಭಾಷಣದ ಬಳಿಕ ತೋರಿದ್ದ ನಡವಳಿಕೆ ನೋವು ಉಂಟುಮಾಡಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ನಮ್ಮ ಪಕ್ಷದ ಸ್ಮೃತಿ ಇರಾನಿಯವರು ಭಾಷಣ ಮಾಡಲು ಆರಂಭಿಸಿದರು. ಆಗ ರಾಹುಲ್ ಗಾಂಧಿ ಸಂಸತ್​​ನಿಂದ ಹೊರಟರು. ಹಾಗೆ ಹೋಗುವಾಗ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಇಂಥದ್ದು ಸಂಸತ್ತಿನಲ್ಲಿ ಎಂದೂ ನಡೆದಿರಲಿಲ್ಲ.

ಭಾಷಣ ಮಾಡುವಾಗ ತಮ್ಮ ತಾಯಿ ಅಲ್ಲೇ ಕೂತಿದ್ದು, ಅವರ ಮುಂದೆಯೇ ಈ ರೀತಿ ನಡೆದುಕೊಂಡಿರುವುದು ಅವರ ಸಂಸ್ಕೃತಿಯನ್ನು ತೋರುತ್ತದೆ. ಮಕ್ಕಳನ್ನು ಹೇಗೆ ಬೆಳಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಅವರ ದುರ್ನಡತೆ ಕುರಿತು ಸ್ಪೀಕರ್​​ಗೆ ದೂರು ನೀಡಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net