

ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
ರೈತರಿಗೆ ಒಳ್ಳೆಯದಾಗುವ ಕೆಲಸಗಳನ್ನು ಮಾಡಲು ಸರ್ಕಾರ ಸಿದ್ದವಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಬಿಜೆಪಿಯ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿ,ರಾಜ್ಯದಲ್ಲಿ ಕತ್ತರಿಸಿದ ಹೂವುಗಳಾದ ಗುಲಾಬಿ, ಜರ್ಬೆರಾ, ಕಾರ್ನೆಷನ್, ಜಿಪ್ಸೊಫಿಲಾ, ಸ್ನ್ಯಾಪ್‌ಡ್ರಾಗನ್, ಸಲೋಶಿಯಾ, ಹೈಡ್ರಾಂಜಿಯಾ, ಡೆಲಿಫಿನಿಯಮ್, ಲಿಸಿಯಾಂತಸ್ ಪ್ರೋಟಿಯಾಸ್, ಸೇವಂತಿಗೆ ಹಾಗೂ ಅಂಥೂರಿಯಂ ಮತ್ತು ಬಿಡಿ ಹೂವುಗಳಾದ ಗುಲಾಬಿ, ಕನಕಾಂಬರ, ಸುಗಂಧರಾಜ, ಗ್ಲಾಡಿಯೋಲಸ್, ಚೆಂಡುಹೂವು, ಆಸ್ಟರ್, ಸೇವಂತಿಗೆ ಮತ್ತು ಮಲ್ಲಿಗೆ ಹೂವುಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ರಾಜ್ಯದಿಂದ 81.44 ಕೋಟಿ ಮೌಲ್ಯದ 2059 ಮೆಟ್ರಿಕ್ ಟನ್ ಹೂವುಗಳನ್ನು ರಪ್ತು ಮಾಡಲಾಗುತ್ತಿದೆ.ವಿವಿಧ ಜಾತಿಯ ಹೂವಿನ ಬೆಳೆಗಳನ್ನು ಬೆಳೆಯಲು ಗರಿಷ್ಟ 1 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನವನ್ನು ನೀಡಲಾಗುತ್ತಿದೆ ಎಂದರು.