ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಹೂ ಬೆಳೆಗಾರರು ಚಿಕ್ಕಬಳ್ಳಾಪುರದಲ್ಲಿ ಹೆಚ್ಚು, ಯಾದಗಿರಿಯಲ್ಲಿ ಕಡಿಮೆ

Sudhee_19_RD_Flower_Show_2024_@_Lalbagh (12)
Published on

ಬೆಂಗಳೂರು:
ರಾಜ್ಯದಲ್ಲಿ ನಾನಾ ಬಗೆಯ ಹೂಗಳನ್ನು ಬೆಳೆಯುವ 105882 ಹೂ ಬೆಳೆಗಾರ ರೈತರಿದ್ದು, ಅವರಲ್ಲಿ ಅತಿ ಹೆಚ್ಚು 22466 ಹೂ ಬೆಳೆಗಾರರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವುದು ವಿಶೇಷ. ಅತಿ ಕಡಿಮೆ 59 ಹೂ ಬೆಳೆಗಾರರು ಇರುವುದು ಯಾದಗಿರಿ ಜಿಲ್ಲೆಯಲ್ಲಿ ಎನ್ನುವುದನ್ನು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 13204, ಕೋಲಾರ ಜಿಲ್ಲೆಯಲ್ಲಿ 12336, ಮಂಡ್ಯದಲ್ಲಿ 8209, ಮೈಸೂರಿನಲ್ಲಿ 7066 ಹೂ ಬೆಳೆಗಾರರಿದ್ದಾರೆ. ಅತಿ ಕಡಿಮೆ ಬೆಳೆಗಾರರನ್ನು ಹೊಂದಿರುವ ಜಿಲ್ಲೆಯಲ್ಲಿ ಬಳ್ಳಾರಿ, ಬೀದರ, ಶಿವಮೊಗ್ಗ, ರಾಯಚೂರು, ಬಿಜಾಪುರ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿವೆ.
ರಾಜ್ಯದಲ್ಲಿ ಪುಷ್ಪ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದರೂ ಪುಷ್ಟಪ ತಳಿ ಅಭಿವೃದ್ಧಿ ಮತ್ತು ಸಂಸಶೋಧನೆಗೆ ಸರ್ಕಾರ ಕಳೆದ 2 ವರ್ಷಗಳಿಂದ ಅನುದಾನ ನೀಡಿಲ್ಲ. ಈ ಬಾರಿ ಅನುದಾನ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net