ಭೀಮಾ ನದಿ ಪಾತ್ರದಲ್ಲಿ ಪ್ರವಾಹದಿಂದ ಕೃಷಿ ಬೆಳೆ ಹಾನಿ; ಸಂತ್ರಸ್ತರ ತುರ್ತು ಪರಿಹಾರಕ್ಕೆ ಕ್ರಮ; ಎಂ.ಬಿ ಪಾಟೀಲ್| Vijayapura

mb patill
Published on

ವಿಜಯಪುರ ;  ಭೀಮಾ ನದಿಯ ಪ್ರವಾಹ ಪೀಡಿತ ಪ್ರದೇಶವಾದ ಆಲಮೇಲ ತಾಲ್ಲೂಕಿನ, ಕುಮಸಗಿ ಗ್ರಾಮಕ್ಕೆ ಇಂದು (ಸೆ.28) ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ್ ಅವರು ಭೇಟಿ ನೀಡಿ ಸಂತ್ರಸ್ತರಿಗೆ ತುರ್ತು ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕೃಷ್ಣಾ ನದಿ ನೀರು ಹರಿವಿಗೆ ಇರುವಂತೆ ಭೀಮಾ ನದಿ ವಿಚಾರದಲ್ಲಿ ನಿಯಂತ್ರಣ ವ್ಯವಸ್ಥೆ ಇಲ್ಲ. ಕೃಷ್ಣೆಗಾದರೆ ಮಹಾರಾಷ್ಟ್ರ ಮತ್ತು ಕರ್ನಾಟಕ ಭಾಗದಿಂದ ನೀರು ನಿಯಂತ್ರಣ ವ್ಯವಸ್ಥೆ ಇದೆ. ಆ ರೀತಿ ಭೀಮಾ ನದಿ ಪಾತ್ರದಲ್ಲಿಲ್ಲ. ಹೀಗಾಗಿ ಅಪಾರ ನೀರು ಹರಿಬಿಟ್ಟ ಕಾರಣ ಹಳ್ಳಿಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಹತ್ತಿ, ತೊಗರಿ, ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ. ಕಬ್ಬು ಶೇ.50 ರಷ್ಟು ನಾಶವಾಗಿರುವುದು ಕಂಡು ಬಂದಿದೆ. ಮಳೆಗೆ ಮನೆಗಳು ಕುಸಿದಿದ್ದು ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ಪ್ರವಾಹ ಪೀಡಿತ ಇಂಡಿ ಮತ್ತು ಸಿಂದಗಿ ಭಾಗದ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಎಂದೂ ಕಾಣದಂಥ ಪ್ರವಾಹ ಈ ಬಾರಿ ಇಂಡಿ, ಸಿಂದಗಿ ಮತ್ತು ಕಲಬುರಗಿಯ ಆಳಂದ ಮತ್ತಿತರ ಭಾಗಗಳಲ್ಲಿ ಕಂಡು ಬಂದಿದೆ. ಸ್ವಾಭಾವಿಕವಾಗಿ ಉಜನಿ ಜಲಾಶಯದಿಂದ ಹರಿಬಿಟ್ಟ ನೀರಿನಿಂದಾಗಿ ಪ್ರವಾಹ ಉಂಟಾಗುತ್ತಿತ್ತು. ಆದರೆ, ಈ ಬಾರಿ ಸೀನಾ ನದಿಯಿಂದ ಅಪಾರ ನೀರು ಹರಿಬಿಡಲಾಗಿದ್ದು, ನದಿ ಪಾತ್ರದ ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ ಎಂದರು.

(ಏಜೆನ್ಸೀಸ್)

ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಜಾಗದ ಅವಶ್ಯಕತೆ ಇದ್ದು, ಅದಕ್ಕಾಗಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ಜಾಗ ಖರೀದಿಸಿ ಪರಿಹಾರ ಕಲ್ಪಿಸಲಾಗುವುದು. ಕುಮಸಗಿ ಗ್ರಾಮದಲ್ಲಿ ಮನೆಗಳು ಮುಳುಗಿದ್ದು ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು. ದೇವಣಗಾಂವದಲ್ಲಿ ಸೇತುವೆ ಪುನರುಜ್ಜೀವನಗೊಳಿಸಲು ಕ್ರಮ ವಹಿಸಲಾಗುವುದು. ಸಂತ್ರಸ್ತರಿಗೆ ತುರ್ತು ಪರಿಹಾರಕ್ಕಾಗಿ ಸಮಾಲೋಚಿಸಿ ಕ್ರಮ ವಹಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net