ನೆರೆ ಸಂತ್ರಸ್ತರ ಹಣ; ಪಂಚತಾರಾ ಹೋಟೆಲ್ ಮೋಜು ಮಸ್ತಿಗೆ!

jds-main-logo-full
Published on

ಬೆಂಗಳೂರು: ಪ್ರವಾಹ ಸಂತ್ರಸ್ತರ ಹಣವನ್ನು, ಅದರಲ್ಲೂ ಜನರು ದೇಣಿಗೆ ಕೊಟ್ಟ ಹಣವನ್ನು ವಿಮಾನದ ಟಿಕೆಟ್ ಖರ್ಚಿಗೆ ಹಾಗೂ ಪಂಚತಾರಾ ಹೋಟೆಲ್ ಮೋಜು ಮಸ್ತಿಗೆ ಕಾಂಗ್ರೆಸ್ ನಾಯಕರು ಬಳಸಿಕೊಂಡಿದ್ದಾರೆ ಎಂದು ಜಾತ್ಯತೀತ ಜನತಾದಳ ಗಂಭೀರ ಆರೋಪ ಮಾಡಿದೆ.

ನೆರೆಪೀಡಿತ ಜನರಿಗೆ ಮೀಸಲಾದ ಹಣವನ್ನು ತನ್ನ ಸ್ವಂತ ಖರ್ಚಿಗೆ ಧಾರೆ ಎರೆದಿದ್ದು ಯಾರು? ಮುಡಾ ಮಳ್ಳ ಮುಖ್ಯಮಂತ್ರಿ! ಭೂಗಳ್ಳ, ಸಿಡಿ ಶಿವು ಉಪ ಮುಖ್ಯಮಂತ್ರಿ!! ಇದು ಕನ್ನಡಿಗರಿಗೆ ಕಾಂಗ್ರೆಸ್ ಕೊಟ್ಟಿರುವ ಕಳಂಕಿತರ ಭಾಗ್ಯ ಎಂದು ಮೂದಲಿಸಿದೆ.

ಕದ್ದ ವಾಚ್ ಕಟ್ಟಿದವರು ಯಾರು? ಮುಡಾವನ್ನು ಮುಕ್ಕಿದ ಮುಖ್ಯಮಂತ್ರಿ ಯಾರು? ಸೈಟುಗಳಿಗೆ ಬೆಲೆ ಕಟ್ಟಿದ ರಿಯಲ್ ಎಸ್ಟೇಟ್ ವ್ಯಾಪಾರಿ ಯಾರು? ಲೂಟಿ, ದಂಧೆಗಳ ಅಪರಾವತಾರ, ಗುತ್ತಿಗೆದಾರರನ್ನು ಹಿಂಸಿಸಿ ಕೊಳ್ಳೆ ಹೊಡೆದ ಕಲೆಕ್ಷನ್ ಕಿಂಗ್ ಡೂಪ್ಲಿಕೇಟ್ ಸಿಎಂ ಯಾರು? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಜೆಡಿಎಸ್ ಕೇಳಿದೆ.

ಒಂದು ಹೆಗಲ ಮೇಲೆ ರಿಯಲ್ ಎಸ್ಟೇಟ್ ರಾಮಯ್ಯ! ಇನ್ನೊಂದು ಹೆಗಲ ಮೇಲೆ ಭಾರತದ ಅತಿದೊಡ್ಡ ಭ್ರಷ್ಟ ಸಿಡಿಶಿವು! ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕುಮಾರಸ್ವಾಮಿ ಅವರಿಗೆ ಕೊಡುವುದು ಗೊತ್ತು, ನಿಮಗೆ ಬಾಚುವುದು ಗೊತ್ತು. ಕಾಮಾಲೆ ಕಾಂಗ್ರೆಸ್ ಕರ್ನಾಟಕಕ್ಕೆ ಅಂಟಿದ ವೈರಸ್ ಎಂದು ಜೆಡಿಎಸ್ ಹರಿಹಾಯ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net