ಸಕ್ಕರೆ ಕಾರ್ಖಾನೆಗಳಿಂದ ವಿಮಾನ ಇಂಧನ; ಸರ್ಕಾರ ಉತ್ತೇಜನ

Sugar flight
Published on

ಸಕ್ಕರೆ ಕಾರ್ಖಾನೆಗಳಿಂದ ಹೂರ ಬರುವ ಇಂಥ ತ್ಯಾಜ್ಯ ವನ್ನು ಸಹ-ವಿದ್ಯುದ್ವಿಭಜನೆ (ಕೋ- ಎಲೆಕ್ಟೋ›ಲಿಸಿಸ್) ಪ್ರಕ್ರಿಯೆಗೆ ಒಳಪಡಿಸುವ ಮೂಲಕ ಎಸ್​ಎಎಫ್ ಪಡೆಯುವ ಪ್ರಯೋಗಗಳನ್ನು ನಡೆಸುವಂತೆ ಸರ್ಕಾರ ಉತ್ತೇಜಿಸುತ್ತಿದೆ.

  • ಕಬ್ಬು ಅರೆಯುವಾಗ ಸಕ್ಕರೆ ಕಾರ್ಖಾನೆಗಳಿಂದ ಹೊರಸೂಸುವ ತ್ಯಾಜ್ಯದಿಂದ ಸುಸ್ಥಿರ ವೈಮಾನಿಕ ಇಂಧನ (ಎಸ್​ಎಎಫ್).
  • ಹೊಸ ಆವಿಷ್ಕಾರ ಬಳಕೆಗೆ ಕೇಂದ್ರ ಸರ್ಕಾರ ಕಾರ್ಯೋನ್ಮುಖ.
  • ಇದು ಹೊಸ ವಿಧಾನವೇನೂ ಅಲ್ಲ ಈ ಹಿಂದಿನಿಂದ ಚಾಲನೆಯಲ್ಲಿರುವ ತಂತ್ರಜ್ಞಾನವೆ. ಆದರೆ, ಈಗ ಇದು ಕೈಗಾರಿಕೆಯ ಪ್ರಯೋಗಕ್ಕೆ ಪಕ್ವವಾಗಿದೆ.
  • ದುಬಾರಿಯಾಗಿರುವ ಪಳೆಯುಳಿಕೆ ಇಂಧನಕ್ಕೆ ಪರ್ಯಾಯವಾಗುವ ಹೊಸ ದಾರಿಯನ್ನು ತೋರಿದೆ.
  • ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ ಪರಿಸರ ಸ್ನೇಹಿ ಇಂಧನ ಆಗಿದೆ.
  • ಅಂಥ ಒಂದು ಪ್ರಯೋಗವನ್ನು ಪುಣೆಯ ಮೂಲದ ಕಂಪನಿ ‘ಎಚ್2ಇ ಪವರ್ ಸಿಸ್ಟಂ ಮಾಡುತ್ತಿದೆ.
  • ಈ ಪ್ರಯೋಗ ಯಶಸ್ವಿಯಾದರೆ, ಮಹಾರಾಷ್ಟ್ರದ ಕೆಲವು ಸಕ್ಕರೆ ಕಾರ್ಖಾನೆಗಳು ಎಸ್​ಎಎಫ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಒಲವು ತೋರಿಸಿವೆ.

ಸಹ-ವಿದ್ಯುದ್ವಿಭಜನೆ ಎಂದರೆ?: ನೀರಿನಿಂದ ಜಲಜನಕ ಮತ್ತು ಆಮ್ಲಜನಕವನ್ನು ವಿದ್ಯುತ್ ಬಳಕೆ ಮಾಡಿ ಪ್ರತ್ಯೇಕ ಮಾಡುವ ವಿಧಾನ. ಈ ಪ್ರಕ್ರಿಯೆಯಲ್ಲಿ ಇಂಗಾಲದ ಡೈಆಕ್ಸೆೈಡ್ ಕೂಡ ವಿಘಟಿಸಿ ಸಿನ್ ಗ್ಯಾಸ್ ಆಗುತ್ತದೆ. ಅದು ಇಂಗಾಲದ ಮಾನಾಕ್ಸೆೈಡ್ ಮತ್ತು ಜಲಜನಕವಾಗುತ್ತದೆ. ಸಿನ್ ಗ್ಯಾಸ್ ಅಥವಾ ಸಿನ್ ಕಚ್ಚಾ ಸಂಯುಕ್ತವು ವೈಮಾನಿಕ ಇಂಧನದ ತಯಾರಿಕೆಗೆ ಅಗತ್ಯವಾದ ಇಂಗಾಲಾಧಾರಿತ ರಾಸಾಯನಿಕ ವಿಂಗಡನೆಯ ಮೂಲಧಾತು ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net