ಆಲನಹಳ್ಳಿ ಸರ್ಕಾರಿ ಶಾಲೆಯಲ್ಲಿ ಧ್ವಜಾರೋಹಣ

IMG-20240126-WA0157
ಆಲನಹಳ್ಳಿ ಶಾಲಾ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯ ಶಿಕ್ಷಕ ಕೆ.ಜಿ.ಪುಟ್ಟರಾಜು ಮಾತನಾಡಿದರು. ರಾಜನಾಯಕ, ಮಹೇಶ್, ಮಧು, ಮಮತಾ ಇದ್ದರು.
Published on

ಬೈಲಕುಪ್ಪೆ: ಸಮೀಪದ ಆಲನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಎಸ್‌ಡಿಎಂಸಿ ಅಧ್ಯಕ್ಷ ಎಂ.ರಾಜನಾಯಕ ಶುಕ್ರವಾರ ನೆರವೇರಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಕೆ.ಜಿ.ಪುಟ್ಟರಾಜು ಮಾತನಾಡಿ, ಭಾರತ ಸರ್ವ ಸ್ವತಂತ್ರವಾಗಿ ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿ ಗಣರಾಜ್ಯ ಎಂದು ಘೋಷಿಕೊಂಡ ಅಮೃತ ಗಳಿಗೆಯೇ ಜ.26. ಬ್ರಿಟಿಷರ ಆಳ್ವಿಕೆಯಿಂದ ನಮ್ಮದೆ ಪ್ರಜಾಪ್ರಭುತ್ವವನ್ನು ಹೊಂದಿದ ಶ್ರೇಷ್ಠ ದಿನ. ಮಹನೀಯರನ್ನು ನೆನಪಿಸಿಕೊಳ್ಳಬೇಕಾದ ಪುಣ್ಯ ದಿನವಾಗಿದೆ ಎಂದು ತಿಳಿಸಿದರು.

ಎಸ್‌ಡಿಎಂಸಿ ಸದಸ್ಯರಾದ ಮಹೇಶ್, ಮಧು, ಮಮತಾ, ಸಹ ಶಿಕ್ಷಕರಾದ ಪರಮೇಶ. ಶ್ರೀನಿವಾಸ, ಧನಲಕ್ಷ್ಮೀ, ಜ್ಯೋತಿ, ಯಶೊದಾ, ಕುಮಾರ. ಸಜ್ಜನ್, ಶಾಲೆ ಮಕ್ಕಳಾದ ಮಾನಸಾ, ದೀಕ್ಷಾ. ಲೇಖನಾ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net