ಕೋವಿಡ್ 19 ರೋಗಿಗಳಿಗೆ ಆ್ಯಂಬುಲೆನ್ಸ್ ಶುಲ್ಕ ನಿಗದಿ ಮಾಡಿ- ರಾಜ್ಯಗಳಿಗೆ ಸುಪ್ರೀಂ ನಿರ್ದೇಶನ

SC-Ambulance
Published on

ನವದೆಹಲಿ: ಕೋವಿಡ್​ 19 ರೋಗಿಗಳು ಪಡೆದುಕೊಳ್ಳುವ ಆ್ಯಂಬುಲೆನ್ಸ್ ಸೇವೆಗೆ ನಿಶ್ಚಿತ ಶುಲ್ಕ ನಿಗದಿಪಡಿಸಬೇಕು ಎಂದು ಎಲ್ಲ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ ಈ ನಿರ್ದೇಶನ ನೀಡಿದ್ದು, ಕೇಂದ್ರ ಸರ್ಕಾರ ಮಾರ್ಚ್ ತಿಂಗಳಲ್ಲಿ ನೀಡಿದ್ದ ಸ್ಟಾಂಡರ್ಡ್​ ಆಪರೇಟಿಂಗ್​ ಪ್ರೊಸೀಜರ್​ (ಎಸ್​ಒಪಿ)ಯನ್ನು ಪಾಲಿಸಬೇಕು ಎಂದು ರಾಜ್ಯಗಳಿಗೆ ಸೂಚನೆ ನೀಡಿದೆ. ಎಸ್​ ಒಪಿಯಲ್ಲಿ ಇರುವಂತೆ ಆ್ಯಂಬುಲೆನ್ಸ್ ಸೇವೆ ಲಭ್ಯತೆಯನ್ನು ಖಾತರಿಗೊಳಿಸಬೇಕು. ಅದೇ ರೀತಿ, ಶುಲ್ಕಕ್ಕೂ ಒಂದು ಮಿತಿ ಇರಬೇಕು ಎಂಬುದನ್ನು ಉಲ್ಲೇಖಿಸಿತು.

ಅರ್ಥ್ ಎಂಬ ಎನ್​ಜಿಒ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ವೇಳೆ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್​ಗೆ ಹಾಜರಾಗಿದ್ದರು. ಈ ಸಂಬಂಧ ಕೇಂದ್ರ ಸರ್ಕಾರ ಈಗಾಗಲೇ ಎಸ್​ಒಪಿ ಪ್ರಕಟಿಸಿದೆ ಎಂಬ ಮಾಹಿತಿಯನ್ನು ಕೋರ್ಟ್​ಗೆ ನೀಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net