ಹುಬ್ಬಳ್ಳಿಯಲ್ಲಿ ಐದು ದಿನಗಳ ಯೋಗ ಶಿಬಿರಕ್ಕೆ ಚಾಲನೆ

Baba Ramdev
Published on

ಹುಬ್ಬಳ್ಳಿ: ಪತಂಜಲಿ ಯೋಗ ಪೀಠ ಹರಿದ್ವಾರ ಹಾಗೂ ವಿಆರ್​ಎಲ್​ ಲಿಮಿಟೆಡ್​ ಏರ್ಪಡಿಸಿದ್ದ ಯೋಗ, ಚಿಕಿತ್ಸೆ ಹಾಗೂ ಧ್ಯಾನ ಶಿಬಿರವನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು.
ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಮಾತನಾಡಿ, 12ವರ್ಷದ ಹಿಂದೆಯೂ ಬಾಬಾ ರಾಮದೇವ ಅವರು ಹುಬ್ಬಳ್ಳಿಗೆ ಬಂದಿದ್ದರು. ಆಗ 20 ಸಾವಿರ ಮಂದಿ ಪ್ರಯೋಜನ ಪಡೆದುಕೊಂಡಿದ್ದರು. ಭಾರತೀಯ ಸಂಸ್ಕೃತಿಯ ಯೋಗವನ್ನ ಬಾಬಾ ರಾಮದೇವ ಅವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದರು.
ಪ್ರಧಾನಿ ಮೋದಿ ಕೂಡ ಯೋಗಕ್ಕೆ ಒತ್ತುಕೊಟ್ಟಿದ್ದಾರೆ. ತಂಬಾಕು, ಗುಟ್ಕಾ ಸೇವನೆ ಹೆಚ್ಚಾಗಿದೆ‌. ಇದನ್ನು ತ್ಯಜಿಸಬೇಕು. ವ್ಯಸನ ತ್ಯಜಿಸುವ ನಿಟ್ಟಿನಲ್ಲಿ ಆಂದೋಲನ ನಡೆಸಬೇಕು. ದೇಶದ ಹಲವೆಡೆ ತಂಬಾಕು ಉತ್ಪನ್ನ ನಿಷೇಧಿಸಲಾಗಿದೆ. ರಾಜ್ಯದಲ್ಲೂ ನಿಷೇಧ ಮಾಡಬೇಕು ಎಂದು ಅವರು ಹೇಳಿದರು.
ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ,
ಜಾಗತಿಕ ಮಟ್ಟದಲ್ಲಿ ಯೋಗ ಪ್ರಸಿದ್ಧಿಯಾಗಲು ಬಾಬಾ ರಾಮದೇವಜೀ ಕಾರಣ. 12 ವರ್ಷಗಳ ಹಿಂದೆ ಇದೆ ಕ್ರೀಡಾಂಗಣದಲ್ಲಿ ಯೋಗ ಶಿಬಿರ ನಡೆದಿತ್ತು. ಆಗಲೂ ಡಾ. ವಿಜಯ ಸಂಕೇಶ್ವರ ಅವರ ನೇತೃತ್ವದಲ್ಲಿ ನಡೆದಿತ್ತು‌. ಈ ಬಾರಿಯೂ ಕೂಡ ವಿಆರ್​ಎಲ್​ ಸಹಯೋಗದಲ್ಲಿ ನಡೆದಿದೆ.
ಯೋಗದಿಂದ ಮನ ವಿಚಲಿತ ಆಗುವುದಿಲ್ಲ. ಅಷ್ಠಾಂಗ ಯೋಗ ಪ್ರಚುರ ಪಡಿಸುತ್ತಿರುವ ಶ್ರೇಯ ಪತಂಜಲಿಗೆ ಸಲ್ಲುತ್ತದೆ ಎಂದರು.
ಡಾ. ವಿಜಯ ಸಂಕೇಶ್ವರ ಅವರಿಗೆ ಪದ್ಮಶ್ರೀ ಪುರಸ್ಕಾರ ದೊರೆತಿರುವುದು ಹುಬ್ಬಳ್ಳಿ ಜನರಿಗೆ ಹೆಮ್ಮೆ ವಿಚಾರ ಎಂದರು.
ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂ.ಡಿ. ಆನಂದ ಸಂಕೇಶ್ವರ, ಉದ್ಯಮಿ ವಿ.ಎಸ್.ವಿ. ಪ್ರಸಾದ, ನ್ಯಾಯಾಧೀಶ ದಿನೇಶಕುಮಾರ, ಲಲಿತಾ ಸಂಕೇಶ್ವರ ಹಾಗೂ ವಾಣಿ ಸಂಕೇಶ್ವರ ಹಾಗೂ ಇತರರು ಇದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net