ಯುವಕನ ಮರ್ಮಾಂಗ ಕತ್ತರಿಸಿದ ಐವರು ತೃತೀಯ ಲಿಂಗಿಗಳು

Crime Logo
Published on

ಬೆಂಗಳೂರು: ಯುವಕನನ್ನು ತೃತೀಯ ಲಿಂಗಿಯಾಗಿ ಪರಿವರ್ತಿಸಲು ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿ ಆತನ ಮರ್ಮಾಂಗಕ್ಕೆ ಕತ್ತರಿಸಿ ಹಾನಿ ಮಾಡಿದ ಆರೋಪ ಸಂಬಂಧ ಐವರು ತೃತೀಯ ಲಿಂಗಿಗಳ ವಿರುದ್ಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.
೧೮ ವರ್ಷದ ಯುವಕ ನೀಡಿದ ದೂರಿನ ಮೇರೆಗೆ ಚಿತ್ರಾ, ಅಶ್ವಿನಿ, ಕಾಜಲ್, ಪ್ರೀತಿ ಮತ್ತು ಮುಗಿಲ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ತನಿಖೆ ಕೈಗೊಂಡಿದ್ದಾರೆ.
ಡಿ.ಜೆ.ಹಳ್ಳಿಯಲ್ಲಿ ವಾಸವಾಗಿದ್ದ ಯುವಕ ಟೀ ಅಂಗಡಿಯಲ್ಲಿ ೩ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ. ಅದೇ ಟೀ ಅಂಗಡಿಗೆ ಬರುತ್ತಿದ್ದ ತೃತೀಯ ಲಿಂಗಿಗಳ ಕಣ್ಣು ಯುವಕನ ಮೇಲೆ ಬಿದ್ದಿತ್ತು. ಚಿತ್ರಾ, ಅಶ್ವಿನಿ, ಕಾಜಲ್ ನಿನಗೆ ದೊಡ್ಡಮನೆಯಲ್ಲಿಟ್ಟು ಇಟ್ಟು ಕೊಂಡು ಹಣ ಸಂಪಾದಿಸುವ ಒಳ್ಳೆಯ ದಾರಿ ತೋರಿಸುತ್ತೇವೆ ಎಂದು ಯುವಕನನ್ನು ಪುಸಲಾಯಿಸಿದ್ದಾರೆ. ಆರೋಪಿತೆಯರನ್ನ ನಂಬಿದ ಯುವಕ ಅವರ ಜತೆ ಹೋದಾಗ ನಿಮ್ಮ ಕೊಲೆ ಮಾಡುವುದಾಗಿ ಬೆದರಿಸಿ ಭಿಕ್ಷಾಟನೆಗೆ ತಳ್ಳಿದ್ದಾರೆ. ಹೀಗೆ ಮೂರು ವರ್ಷಗಳ ಕಾಲ ಭಿಕ್ಷಾಟನೆ ಮಾಡಿದ ಯುವಕ ಅವರಿಗೆ ಹಣ ತಂದು ಕೊಟ್ಟಿದ್ದಾನೆ. ಇನ್ನೂ ಹೆಚ್ಚು ಸಂಪಾದಿಸಬೇಕು, ನೀನು ಈಗ ಗಂಡು ಆಗಿರುವಾಗಲೇ ದಿನಕ್ಕೆ ೨ ಸಾವಿರ ದುಡಿಯುತ್ತಿದ್ದೀಯಾ, ಇನ್ನು ಹೆಣ್ಣಾದರೆ ಹೆಚ್ಚು ಸಂಪಾದಿಸಬಹುದು ಎಂದು ಲಿಂಗ ಪರಿವರ್ತನೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಯುವಕ ಒಪ್ಪದಿದ್ದಾಗ ಆತನನ್ನು ಹಿಂಸಿಸಿ ಬೆನ್ನಿಗೆ ಮತ್ತು ಬರುವ ಇಂಜೆಕ್ಷನ್ ಕೊಟ್ಟು ಯುವಕನ ಮರ್ಮಾಂಗ ಕತ್ತರಿಸಿದ್ದಾರೆ. ನಂತರ ಯುವಕನನ್ನು ಕರೆದೊಯ್ದು ಪೂಜೆ ಮಾಡಿಸಿ ಲೈಂಗಿಕ ಕಾರ್ಯಕರ್ತಳಾಗಿ ಕೆಲಸ ಮಾಡು ಎಂದು ಪೀಡಿಸಿದ್ದಾರೆ. ಇಷ್ಟಕ್ಕೆ ಬಿಡದೇ ೫ ಲಕ್ಷ ರೂ.ಹಣ ಕೊಡು ಎಂದು ಯುವಕನನ್ನು ಹಿಂಸಿಸಿದ್ದಾರೆ. ಇದರಿಂದ ನೊಂದ ಯುವಕ ಅವರಿಂದ ತಪ್ಪಿಸಿಕೊಂಡು ಬಂದು ಐವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net