ಮೋಜು-ಮಸ್ತಿಗಾಗಿ ಗಂಧದ ಮರಗಳಿಗೆ ಕನ್ನ, ಐವರು ಅಂತರ್​​​ ರಾಜ್ಯ ಕಳ್ಳರ ಬಂಧನ

pic theif
Published on

ಬೆಂಗಳೂರು: ತಮ್ಮ ದುಶ್ಚಟಗಳ ಖರ್ಚಿಗಾಗಿ ಕಳ್ಳತನದ ಹಾದಿ ಹಿಡಿದಿದ್ದ ಐವರು ಅಂತರ್ ರಾಜ್ಯ ಕಳ್ಳರನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಐವರು ಆರೋಪಿಗಳಿಂದ 125 ಕೆ.ಜಿ ಶ್ರೀಗಂಧ, 1 ಕಾರು, ಮರ ಕತ್ತರಿಸುವ ಸಲಕರಣೆ, ತೂಕದ ಯಂತ್ರ ಜಪ್ತಿ ಮಾಡಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಮದ್ಯಪಾನ, ಜೂಜಿನ ಚಟಕ್ಕೆ ದಾಸರಾಗಿದ್ದವರು ಸುಲಭವಾಗಿ ಹಣ ಗಳಿಕೆಗಾಗಿ ಶ್ರೀಗಂಧದ ಮರ ಕಳ್ಳತನದ ಹಾದಿ ಹಿಡಿದಿದ್ದರು.

ಏರ್ ಫೋರ್ಸ್ ಇಂಜಿನಿಯರ್ಸ್ ಕ್ಯಾಂಪಸ್‌ನಲ್ಲಿ ಶ್ರೀಗಂಧದ ಮರ ಕದ್ದಿದ್ದ ಆರೋಪಿಗಳು. ವಿವಿಧೆಡೆ ಶ್ರೀಗಂಧ ಮರ ಕಳ್ಳತನದ ಕೇಸಿನಲ್ಲಿ ಜೈಲು ಸೇರಿದ್ದರು. ಜೈಲಿನಲ್ಲೇ ಪರಸ್ಪರ ಪರಿಚಯವಾಗಿ ಹೊರಬಂದ ಬಳಿಕ ಪುನಃ ಸಕ್ರಿಯವಾಗಿದ್ದರು. ಸದ್ಯ ಗಂಗಮ್ಮನಗುಡಿ ಪೊಲೀಸರಿಂದ ಐವರೂ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net