More

    ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು: ಮರಾಠಿಗರನ್ನ ಖುಷಿ ಪಡಿಸಲ ಬಿಜೆಪಿ ಮಾಸ್ಟರ್​ ಪ್ಲ್ಯಾನ್​!

    ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಯ್ಕೆಗಾಗಿ ಸೂತ್ರ ಸಿದ್ಧಪಡಿಸಿರುವ ಬಿಜೆಪಿ, ಮರಾಠ ಸಮುದಾಯವನ್ನು ಖುಷಿ ಪಡಿಸಲು ಪ್ಲ್ಯಾನ್ ಮಾಡಿದೆ.

    ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಯೋಜನೆ ರೂಪಿಸಿರುವ ಬಿಜೆಪಿ ನಾಯಕರು, ಮರಾಠಿ ಭಾಷಿಕರಿಗೇ ಮೇಯರ್ ಹುದ್ದೆ ನೀಡಲು ಚಿಂತನೆ ನಡೆಸಿದೆ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಮರಾಠಿ ಭಾಷಿಕರು ಎಂಇಎಸ್ ಬದಲು ಬಿಜೆಪಿಗೆ ಜೈ ಎನ್ನುವ ಗಡಿ, ಭಾಷೆ ವಿಚಾರ ಮುಂದಿಟ್ಟುಕೊಂಡು ಬೆಳಗಾವಿಯಲ್ಲಿ ರಾಜಕೀಯ ಮಾಡುತ್ತಿದ್ದ ಎಂಇಎಸ್​ಗೆ ಮುಖಭಂಗ ಉಂಟು ಮಾಡಿದ್ದರು. ಇದೇ ಮೊದಲ ಬಾರಿಗೆ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ತಂದುಕೊಡುವಲ್ಲಿ ಅವರ ಪಾತ್ರ ಮಹತ್ವದ್ದು. ಇದಕ್ಕೆ ಪ್ರತಿಯಾಗಿ ಮರಾಠಿ ಸಮುದಾಯಕ್ಕೆ ಮೇಯರ್ ಹುದ್ದೆ ನೀಡಲು ಬಿಜೆಪಿ ಸಜ್ಜಾಗಿದೆ.

    ಪಾಲಿಕೆಯ 58 ವಾಡ್೯ಗಳಲ್ಲಿ 54 ಸ್ಥಾನಕ್ಕೆ ಬಿಜೆಪಿ ಸ್ಪರ್ಧಿಸಿತ್ತು. ಈ ಪೈಕಿ ಒಟ್ಟು 36 ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಪಾಲಿಕೆಯಲ್ಲಿ ಅಧಿಕಾರಕ್ಕೇರಲು ಒಟ್ಟು 31 ಸ್ಥಾನ ಗೆಲಲ್ಲಬೇಕಿದೆ. ಆದರೆ, ಬಿಜೆಪಿ ಇನ್ನೂ 5 ಸ್ಥಾನವನ್ನ ಹೆಚ್ಚು ಗೆದ್ದು ಇತಿಹಾಸ ನಿರ್ಮಿಸಿದೆ. ಬಿಜೆಪಿಯಿಂದ ಗೆದ್ದ 36 ಜನರ ಪೈಕಿ 11 ಮಂದಿ ಮರಾಠಿ ಭಾಷಿಕರು. ಇದರಲ್ಲಿ ಓರ್ವ ಸದಸ್ಯನನ್ನು ಮೇಯರ್ ಹುದ್ದೇಗೇರಿಸಲು ಬಿಜೆಪಿ ಚಿಂತನೆ ಮಾಡಿದೆ. ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಮೇಯರ್, ಉತ್ತರ‌ ವಿಧಾನಸಭಾ ಕ್ಷೇತ್ರಕ್ಕೆ ಉಪಮೇಯರ್ ಹುದ್ದೆ ಬಿಟ್ಟುಕೊಡುವ ಬಗ್ಗೆ ಚರ್ಚೆಯಾಗುತ್ತಿದೆ.

    ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ, ಸಾವುಗಳು ಹೆಚ್ಚುತ್ತವೆ: ಭವಿಷ್ಯ ನುಡಿದ ಕೋಡಿಶ್ರೀ

    ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ, ಸಾವುಗಳು ಹೆಚ್ಚುತ್ತವೆ: ಭವಿಷ್ಯ ನುಡಿದ ಕೋಡಿಶ್ರೀ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts