

ನವದೆಹಲಿ: ಕೋವಿಡ್ 19 ಸಂಬಂಧಿಸಿದ ಲಾಕ್ಡೌನ್ನಿಂದ ಆಗಿರುವ ಆರ್ಥಿಕ ಕುಸಿತಕ್ಕೆ ಉತ್ತೇಜನ ನೀಡುವ ಸಲುವಾಗಿ ಘೋಷಿಸಿರುವ ಆತ್ಮನಿರ್ಭರ ಭಾರತ ಪ್ಯಾಕೇಜ್ ವ್ಯಾಪ್ತಿಯಲ್ಲಿ ಇದುವರೆಗೆ ಅಂದರೆ ಜುಲೈ 23 ರತನಕ ಐದು ಪ್ರಸ್ತಾವನೆಗಳಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಈ ಪ್ರಸ್ತಾವನೆಗಳ ಮೊತ್ತ 3,090 ಕೋಟಿ ರೂಪಾಯಿ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಆತ್ಮನಿರ್ಭರ ಭಾರತ ಪ್ಯಾಕೇಜ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 2020ರ ಜುಲೈ 23ರ ತನಕ 3,090 ಕೋಟಿ ರೂಪಾಯಿ ಮೌಲ್ಯದ 5 ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ಇವುಗಳಿಗೆ ಅನುಮೋದನೆಯನ್ನೂ ಸರ್ಕಾರ ನೀಡಿದೆ. ಇನ್ನೂ 35 ಅರ್ಜಿಗಳು ಸಲ್ಲಿಕೆಯಾಗಿದ್ದು 13,776 ಕೋಟಿ ರೂಪಾಯಿ ಹಣಕಾಸಿನ ನೆರವು ಯಾಚಿಸಿವೆ. ಇವುಗಳು ಕೂಡ ಪರಿಶೀಲನೆಯಲ್ಲಿವೆ ಎಂದು ಸರ್ಕಾರ ತಿಳಿಸಿದೆ.
ಇದಲ್ಲದೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇ 13ರಂದು ಆತ್ಮನಿರ್ಭರ ಪ್ಯಾಕೇಜ್ ಅಧೀನ ಘೋಷಿಸಿದ್ದ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳ ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳಿಗೆ ಉತ್ತೇಜನ ನೀಢುವ ಸಲುವಾಗಿ 30,00 ಕೋಟಿ ರೂಪಾಯಿಗಳ ವಿಶೇಷ ಲಿಕ್ವಿಡಿಟಿ ಯೋಜನೆ ಘೋಷಿಸಲಾಗಿತ್ತು. ಇದು ಜುಲೈ 1ರಿಂದ ಅನುಷ್ಠಾನಗೊಳ್ಳತೊಡಗಿದೆ.
ಬ್ಯಾಂಕಿಂಗೇತರ ಹಣಕಾಸು ಕಂಪನಿಗಳ ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳ ಉತ್ತೇಜನಕ್ಕೂ ಕ್ರಮ ತೆಗೆದುಕೊಳ್ಳಲಾಗಿದೆ. ಹಣಕಾಸು ಕ್ಷೇತ್ರಕ್ಕೆ ಹಾನಿಯಾಗದಂತೆ ಅದರ ಸಂಭಾವ್ಯ ಅಪಾಯಗಳನ್ನು ಮುಂಚಿತವಾಗಿಯೆ ಮನಗಂಡು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. (ಏಜೆನ್ಸೀಸ್)