

ನವದೆಹಲಿ: ಚೀನಾದಿಂದ ಎರಡು ವಿಶೇಷ ವಿಮಾನಗಳಲ್ಲಿ ಭಾರತಕ್ಕೆ ಬಂದಿಳಿದಿದ್ದ ಐವರಲ್ಲಿ ಕೊರೊನಾ ಗುಣಲಕ್ಷಣಗಳು ಕಂಡುಬಂದಿವೆ. ವಿಶೇಷ ಶಿಬಿರಗಳಲ್ಲಿದ್ದ ಇವರನ್ನು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಶನಿವಾರ ಮತ್ತು ಭಾನುವಾರದಂದು ಚೀನಾದ ವುಹಾನ್ನಿಂದ ಎರಡು ವಿಶೇಷ ವಿಮಾನಗಳು ಭಾರತಕ್ಕೆ ಬಂದಿಳಿದಿವೆ. ಅದರಲ್ಲಿ ಒಟ್ಟಾರೆಯಾಗಿ 647 ಜನರನ್ನು ಭಾರತಕ್ಕೆ ತಂದಿಳಿಸಲಾಗಿದೆ. ಅವರನ್ನೆಲ್ಲರನ್ನು ದೆಹಲಿಯ ಮಣಿಸರದಲ್ಲಿ ವಿಶೇಷ ಚಿಕಿತ್ಸಾ ಕೊಠಡಿಗಳಲ್ಲಿ ಇಡಲಾಗಿತ್ತು. ಚೀನಾದಿಂದ ಬರುವಾಗ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದ ಅವರಲ್ಲಿ ಕೊರೊನಾ ಲಕ್ಷಣಗಳಿರದವರನ್ನು ಮಾತ್ರವೇ ಕರೆತರಲಾಗಿತ್ತು. ಆದರೆ ಇದೀಗ ವಿಶೇಷ ಚಿಕಿತ್ಸಾ ಕೊಠಡಿಗಳಲ್ಲಿರುವವರಲ್ಲಿ ಐದು ಜನರಲ್ಲಿ ಕೊರೊನಾ ಗುಣಲಕ್ಷಣಗಳು ಕಾಣಿಸಿಕೊಂಡಿವೆ.
ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿರವವರನ್ನು ದೆಹಲಿಯ ಕ್ಯಾಂಟ್ನಲ್ಲಿರುವ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಐವರನ್ನೂ ತಪಾಸಣೆಗೆ ಒಳಪಡಿಸಲಾಗಿದೆ. (ಏಜೆನ್ಸೀಸ್)