

ವಿರಾಜಪೇಟೆ : ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮಹಿಳಾ ಓದುಗರಿಗೆ ಆಯೋಜಿಸಿದ್ದ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯಲ್ಲಿ ವಿರಾಜಪೇಟೆ ತಾಲೂಕಿನ ಐವರು ವಿಜೇತರನ್ನು ಗುರುವಾರ ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಲಾಯಿತು.
ಕಾವೇರಿ ಕಾಲೇಜಿನಲ್ಲಿ ಪ್ರಾಂಶುಪಾಲ ಬೆನೆಡಿಕ್ಟ್ ಆರ್.ಸಲ್ದಾನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರಿಯಾ ಮಾದಪ್ಪ, ಡಾ.ಕೆ.ಜಿ.ವೀಣಾ, ಅಕ್ಷಿತಾ ನಾಯ್ಕ, ನಿರ್ಮಿತಾ ಅವರು ಲಕ್ಕಿ ಡಿಪ್ ಮೂಲಕ ವಿಜೇತರನ್ನು ಆಯ್ಕೆ ಮಾಡಿದರು.
ಪ್ರಾಂಶುಪಾಲ ಬೆನೆಡಿಕ್ಟ್ ಆರ್. ಸಲ್ದಾನ ಮಾತನಾಡಿ, ಸ್ತ್ರೀಯರಿಗೆ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಿ ಸೀರೆಯನ್ನು ಉಡುಗೊರೆಯಾಗಿ ನೀಡುತ್ತಿರುವುದು ಸಂತಸದ ವಿಷಯ. ಸ್ತ್ರೀಯರನ್ನು ಸುಶಿಕ್ಷಿತರನ್ನಾಗಿ ಮಾಡಿ ಸಮಾಜದ ಮುನ್ನೆಲೆಗೆ ತರುವ ಕೆಲಸ ನಡೆಯಬೇಕು. ಗ್ರಾಮೀಣ ಹಾಗೂ ನಗರದ ಎಲ್ಲ ಮಹಿಳೆಯರಿಗೂ ಮುಕ್ತವಾಗಿ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ಒಂದೆಡೆ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯಾದರೆ ಮತ್ತೊಂದೆಡೆ ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರೂ ಪತ್ರಿಕೆಯನ್ನು ಓದುವ ಹವ್ಯಾಸದೊಂದಿಗೆ ತಮ್ಮ ಸಾಮಾನ್ಯ ಜ್ಞಾನವನ್ನು ವೃದ್ಧಿಗೊಳಿಸುವ ಕೆಲಸವನ್ನು ಮಾಡಿದ್ದಾರೆ. ವಿಜಯವಾಣಿ ಪತ್ರಿಕೆ ಇನ್ನು ಮುಂದೆಯೂ ಮಹಿಳಾ ಹಾಗೂ ಮಕ್ಕಳ ಕೇಂದ್ರಿತ ಸ್ಪರ್ಧೆಗಳನ್ನು ನಡೆಸುತ್ತಾ ಉನ್ನತ ಮಟ್ಟಕ್ಕೆ ಪತ್ರಿಕೆ ಏರಲಿ ಎಂದು ಶುಭ ಹಾರೈಸಿದರು.
ಉಪನ್ಯಾಸಕಿ ಪ್ರಿಯಾ ಮುದ್ದಪ್ಪ ಮಾತನಾಡಿ, ಸ್ತ್ರೀ ತಾಯಿಯಾಗಿ, ಮಡದಿಯಾಗಿ, ಸಹೋದರಿಯಾಗಿ ಪ್ರತಿಯೋಬ್ಬರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತಾಳೆ. ಕುಟುಂಬ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತಿರುವ ಇಂತಹ ಸ್ತ್ರೀ ವರ್ಗವನ್ನು ಸುಶಿಕ್ಷಿತರನ್ನಾಗಿ ಮಾಡಬೇಕಿದೆ. ಪ್ರತಿಯೊಬ್ಬ ಮಹಿಳೆ ಪ್ರತಿದಿನ ಒಂದಷ್ಟು ಸಮಯ ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆ ಮಹಿಳೆಯರ ಸಾಮಾನ್ಯ ಜ್ಞಾನವನ್ನು ಪರೀಕ್ಷಿಸಲು ನಡೆಸಿದಂತ ನಾರಿಗೊಂದು ನಿನಗೊಂದು ಸ್ಯಾರಿ ಕಾರ್ಯಕ್ರಮ ಶ್ಲಾಘನೀಯ ಕಾರ್ಯ ಎಂದರು.
ಮತ್ತೊಬ್ಬ ಅತಿಥಿ ಉಪನ್ಯಾಸಕಿ ಡಾ.ವೀಣಾ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಪತ್ರಿಕೆಗಳನ್ನು ಓದುವಂತೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ತರವಾದದು. ಪತ್ರಿಕೆಯನ್ನು ಓದುವುದು ಮಾತ್ರವಲ್ಲ ಅದರಲ್ಲಿರುವ ಪ್ರಶ್ನೆಗಳಿಗೆ ಸರಿ ಉತ್ತರ ಬರೆದು ಕಳುಹಿಸಲು ಮಹಿಳೆಯರಿಗೆ ಅವಕಾಶ ನೀಡಿರುವುದು ನಾರಿ ಶಕ್ತಿಗೆ ನೀಡಿದ ಗೌರವವಾಗಿ ತೋರುತ್ತಿದೆ. ಆದಷ್ಟು ಎಲ್ಲರೂ ಪ್ರತಿದಿನ ಒಂದೆರಡು ಪತ್ರಿಕೆಗಳನ್ನಾದರೂ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕೆಂದರು.
ಮಹಿಳೆಯರ ಸಾಮಾನ್ಯ ಜ್ಞಾನವನ್ನು ಪರೀಕ್ಷಿಸಿ ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಿ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಸೀರೆಯನ್ನು ಬಹುಮಾನವಾಗಿ ಕೊಡುತ್ತಿರುವುದು ನಾರಿ ಶಕ್ತಿಗೆ ತೋರುವ ಗೌರವ.
ಅಕ್ಷಿತಾ ನಾಯ್ಕ ಉಪನ್ಯಾಸಕಿ ಕಾವೇರಿ ಕಾಲೇಜು
--------
ಕೋಟ್..
ಪತ್ರಿಕೆಗಳನ್ನು ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುವುದರಿಂದ ನಮ್ಮ ಜ್ಞಾನ ವೃದ್ಧಿ ಹೊಂದುವುದರೊಂದಿಗೆ ಪದಗಳ ಪರಿಚಯ ಆಗುತ್ತದೆ. ಮಹಿಳೆಯರು ಪ್ರತಿನಿತ್ಯ ಕುಟುಂಬದ ನಿರ್ವಹಣೆ, ಇನ್ನಿತರ ಚಟುವಟಿಕೆಗಳಲ್ಲಿ ಬಿಡುವು ಮಾಡಿಕೊಂಡು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತರ ಬರೆದು ಕಳುಹಿಸಿರುವುದು ಸಂತೋಷದ ವಿಷಯ. ಇದೇ ರೀತಿ ಪತ್ರಿಕೆ ಮಹಿಳೆಯರನ್ನು ಕೇಂದ್ರಿಕರಿಸಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಿ.
ನಿರ್ಮಿತಾಉಪನ್ಯಾಸಕಿ ಕಾವೇರಿ ಕಾಲೇಜು
---------
ಸೀರೆ ಗೆದ್ದವರು : ಎ.ಎಂ.ಕಾವೇರಮ್ಮ ಕೊಟ್ಟೋಳಿ ಗ್ರಾಮ ವಿರಾಜಪೇಟೆ, ಬಿ.ಬಿ. ಸತ್ಯಭಾಮಾ ಬೇಟೋಳಿ ಗ್ರಾಮ ವಿರಾಜಪೇಟೆ, ಎ.ಎಂ. ಲಿಖಿತಾ ಓಂಕಾರ್ ಲೇಔಟ್, ಬಿ.ಎನ್. ಸ್ವಾತಿ ಬೇಟೋಳಿ ಗ್ರಾಮ, ವಿರಾಜಪೇಟೆ, ಐ.ಎನ್. ಅನಿತಾ ನಿಸರ್ಗ ಲೇಔಟ್ ಪಂಜರುಪೇಟೆ.