ಸೇನಾ ಶಿಬಿರದ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದ ಐವರು ಉಗ್ರರ ಬಂಧನ

bandipora
Published on

ಶ್ರೀನಗರ: ಇಸ್ಲಾಮಿಕ್​ ಸ್ಟೇಟ್​ ಆಫ್ ಜಮ್ಮು ಆ್ಯಂಡ್​ ಕಾಶ್ಮೀರ ಸಂಘಟನೆಗೆ ಸೇರಿದ ಐವರು ಉಗ್ರರನ್ನು ಇಂದು ಬಂಡಿಪೋರಾ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಕಾಶ್ಮೀರದಲ್ಲಿರುವ ಸೇನಾ ಶಿಬಿರವೊಂದರ ಮೇಲೆ ದಾಳಿ ನಡೆಸುವ ದೊಡ್ಡ ಯೋಜನೆಯನ್ನೇ ಹಾಕಿಕೊಂಡಿದ್ದ ಇವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇದನ್ನೂ ಓದಿ: ರಫೇಲ್​ ಯುದ್ಧವಿಮಾನಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ; ಅಂಬಾಲದಲ್ಲಿ ಹೈಅಲರ್ಟ್​

ಐಸಿಸ್​ನ ಪ್ರದೇಶಿಕ ಸಂಘಟನೆಗಳಾದ ಐಎಸ್​ಜೆಕೆ ಅಥವಾ ವಿಲಾಯಾಹ್-ಅಲ್-ಹಿಂದ್ ಉಗ್ರ ಸಂಘಟನೆಗಳು ಆರ್ಮಿ ಕ್ಯಾಂಪ್ ಮೇಲೆ ದಾಳಿ ನಡೆಸುವ ಸಂಚು ರೂಪಿಸಿವೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಡಿಪೋರಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಬಂಧಿತರಿಂದ ಮಾರಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಐಎಸ್​ಜೆಕೆ ಉಗ್ರಸಂಘಟನೆ ಯುವಜನರನ್ನು ಭಯೋತ್ಪಾದನೆಗೆ ಸೆಳೆಯುವ ಜತೆ ಉಳಿದ ಕೆಲವು ಉಗ್ರಸಂಘಟನೆಗಳಿಗೂ ಸಹಕಾರ ನೀಡುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net