

ದೆಹಲಿ: ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿ ಪೊಲೀಸರು ಐವರು ಜೂಜುಕೋರರನ್ನು ಬಂಧಿಸಿ ಅವರಿಂದ ಇಸ್ಪೀಟ್ ಎಲೆಗಳನ್ನು ಮತ್ತು 15 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ವ್ಯಕ್ತಿಗಳನ್ನು ಮಾಯಾಂಕ್, ಅಮಿತ್ ಕುಮಾರ್, ಮಹೇಂದರ್ ಸಿಂಗ್, ನರೇಂದರ್ ಕುಮಾರ್ ಮತ್ತು ನವೀನ್ ಗರ್ಗ್ ಎಂದು ಗುರುತಿಸಲಾಗಿದೆ.
ಭಾನುವಾರ ದೆಹಲಿಯ ಖಾತು ಶ್ಯಾಮ್ ಪಾರ್ಕ್‌ನಲ್ಲಿ ಕೆಲವರು ಜೂಜು ಆಡುತ್ತಿರುವ ಕುರಿತು ಮಾಹಿತಿ ಸಿಕ್ಕ ತಕ್ಷಣ ಬಾದರ್ಪುರದ ಎಸಿಪಿ ನೇತೃತ್ವದಲ್ಲಿ ಪೊಲೀಸರ ತಂಡ ಉದ್ಯಾನವನದ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿದೆ.
ವಿಚಾರಣೆಯ ಸಮಯದಲ್ಲಿ, ಬಂಧಿತರು ತಾವು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದು, ಜೂಜು ಆಡುವ ಮೂಲಕ “ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಯಾವುದೇ ಆರೋಪಿಗೂ ಅಪರಾಧದ ಹಿನ್ನೆಲೆ ಇರುವುದು ಕಂಡುಬಂದಿಲ್ಲ.