

ಬೆಂಗಳೂರು: ಕರ್ನಾಟಕದ ಉತ್ತರ ಪ್ರಾಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮತಶಿಕಾರಿಗೆ ಇಳಿಯಲಿದ್ದಾರೆ. ಲೋಕಸಭೆ ಎರಡನೇ ಹಂತದ ಚುನಾವಣೆಯ ಪ್ರಚಾರಕ್ಕೆ ಮೊದಲ ಹಾಗೂ ಅಂತಿಮ ಪ್ರವಾಸಯಿದಾಗಿದೆ.
ಉತ್ತರ ಪ್ರಾಂತದಲ್ಲಿ ಮೋದಿ ಎರಡು ದಿನ, ಐದು ರ‌್ಯಾಲಿಗಳನ್ನು ನಡೆಸುತ್ತಿರುವುದೂ ಕೂಡ ಇದೇ ಮೊದಲಾಗಿದ್ದು, ನಮೋ ಸಾರ್ವಜನಿಕ ಸಭೆಗಳನ್ನು ಯಶಸ್ವಗೊಳಿಸಲು ರಾಜ್ಯ ಬಿಜೆಪಿ ಸಜ್ಜಾಗಿದೆ. ಭಾನುವಾರ ಬೆಳಗ್ಗೆ 10ಕ್ಕೆ ಬೆಳಗಾವಿ, ಮಧ್ಯಾಹ್ನ 12ಕ್ಕೆ ಶಿರಸಿ, ಮಧ್ಯಾಹ್ನ 2ಕ್ಕೆ ದಾವಣಗೆರೆ ಮತ್ತು ಸಂಜೆ 4ಕ್ಕೆ ಹೊಸಪೇಟೆಯಲ್ಲಿ ಮತಪ್ರಚಾರ ನಡೆಸಲಿದ್ದಾರೆ. ತಲಾ ಎರಡರಂತೆ ನಾಲ್ಕು ರ‌್ಯಾಲಿಗಳು ಒಟ್ಟು ಎಂಟು ಲೋಕಸಭೆ ಕ್ಷೇತ್ರಗಳನ್ನು ಕೇಂದ್ರೀಕರಿಸಿದೆ.
ನಾಲ್ಕು ರ‌್ಯಾಲಿಗಳು ಮುಗಿದ ನಂತರ ಮೋದಿಯವರು ಹೊಸಪೇಟೆಯ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಏ.29ರ ಬೆಳಗ್ಗೆ 11ಕ್ಕೆ ಬಾಗಲಕೋಟೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮತ ಪ್ರಚಾರ ನಡೆಸಿ, ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಟ್ಟು 10 ಕ್ಷೇತ್ರಗಳನ್ನು ಒಳಗೊಳ್ಳುವ ಐದು ಸಾರ್ವಜನಿಕ ಸಭೆಗಳು ಪಕ್ಷದ ಪರವಾಗಿ ಸೃಷ್ಟಿಸಿ, ಪ್ರಚಾರಕ್ಕೆ ಇನ್ನಷ್ಟು ಹುರುಪು ತುಂಬಲಿದೆ. ಆಂತರಿಕ ಉತ್ಸಾಹ ಹೆಚ್ಚಳದಿಂದ ಗೊಂದಲಗಳು ಬಗೆಹರಿಯಲಿವೆ ಎಂಬ ಆಶಾಭಾವನೆ ಪಕ್ಷದ ರಾಜ್ಯ ನಾಯಕರದಾಗಿದೆ.
ಕರ್ನಾಟಕದ ಉತ್ತರ ಭಾಗದಲ್ಲಿ ಇತರೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳ ಜನಸಂಖ್ಯೆಯೇ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಒಬಿಸಿ ಪಟ್ಟಿಗೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್ ಸರ್ಕಾರ ಶಿಾರಸು ಮಾಡಿರುವುದು ಮೋದಿ ಪ್ರಧಾನ ಅಸವಾಗುವ ಸಾಧ್ಯತೆಗಳಿವೆ.
ಐದು ರ‌್ಯಾಲಿಗಳಲ್ಲಿ ತಲಾ ಒಂದು ಲಕ್ಷ ಜನರು ಪಾಲ್ಗೊಳ್ಳಬಹುದು ಎಂದು ಪಕ್ಷ ನಿರೀಕ್ಷಿಸಿದೆ. ಪ್ರತಿ ಸಾರ್ವಜನಿಕ ಸಭೆಯಲ್ಲಿ ಹೊಸ ಮತದಾರರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಿದೆ. ಜತೆಗೆ ಸ್ಥಳೀಯ ಸಾಂಸ್ಕೃತಿಕ ಸೊಗಡು ಹಾಗೂ ಸಮುದಾಯಗಳ ವೈಶಿಷ್ಟ್ಯವನ್ನು ಸಾರುವುದಕ್ಕಾಗಿ ಆಯಾ ಸಮುದಾಯಗಳಿಗೆ ಪ್ರತ್ಯೇಕ ಆಸನಗಳನ್ನು ಸಜ್ಜುಗೊಳಿಸಿದೆ.