

ಮಂಗಳೂರು: ಕೋವಿಡ್ ವಿರುದ್ಧ ಹೋರಾಡುತ್ತಿದ್ದ ವಾರಿಯರ್ಸ್ ಮೇಲೂ ಸೋಂಕಿನ ಕೆಂಗಣ್ಣು ಬಿದ್ದಿದೆ. ಕೋವಿಡ್ನಿಂದಾಗಿ ಈಗಾಗಲೇ ಸಾಕಷ್ಟು ವೈದ್ಯರ ಸಾವು-ನೋವು ಸಂಭವಿಸಿದೆ. ಈಗ ಮತ್ತೆ ಐವರು ವೈದ್ಯರಿಗೆ ಸೋಂಕು ವಕ್ಕರಿಸಿದ್ದು, ಆತಂಕ ಮೂಡಿಸಿದೆ.
ಮಂಗಳೂರಿನ ಕೋವಿಡ್ ಆಸ್ಪತ್ರೆ, ಲೇಡಿಗೋಷನ್ ಆಸ್ಪತ್ರೆ ಮತ್ತು ಕೆಎಂಸಿನಲ್ಲಿ ಕೆಲಸ ಮಾಡುತ್ತಿದ್ದ ಐವರು ಪಿಜಿ ವೈದ್ಯರಿಗೆ ಕರೊನಾ ಪಾಸಿಟಿವ್ ಬಂದಿದೆ. ಪರಿಣಾಮ 30 ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ. ಇದನ್ನೂ ಓದಿರಿ ಥರ್ಮಲ್ ಸ್ಕ್ರೀನಿಂಗ್ ವೇಳೆ ಕುಸಿದುಬಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ
28 ವರ್ಷದ ಯುವಕ, 28 ವರ್ಷದ ಇಬ್ಬರು ಯುವತಿಯರು, 27 ವರ್ಷದ ಇಬ್ಬರು ಯುವತಿಯರು ಸೇರಿ ಐವರು ವೈದ್ಯರಿಗೆ ಸೋಂಕು ತಗುಲಿದ್ದು, ಆಘಾತ ಉಂಟುಮಾಡಿದೆ.
ಒಬ್ಬರು ಕೋವಿಡ್ ಆಸ್ಪತ್ರೆಯಲ್ಲಿ, ಇನ್ನೊಬ್ಬರು ಕೆ.ಎಂ.ಸಿ. ನಲ್ಲಿ, ಮೂವರು ಲೇಡಿಗೋಷನ್ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರೆಲ್ಲರೂ ಅತ್ತಾವರದ ಅಪಾರ್ಟ್ಮೆಂಟ್ಗಳಲ್ಲಿ ವಾಸವಿದ್ದರು.