ಈ 5 ಪದಗಳಿಗೆ ಮ್ಯೂಟ್​ ಹಾಕಿ! ದೇವರಕೊಂಡ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎಚ್ಚರಿಕೆ

WhatsApp Image 2024-04-03 at 3.24.06 PM
Published on

ಆಂಧ್ರಪ್ರದೇಶ: ಟಾಲಿವುಡ್ ಸೆನ್ಸೇಷನ್​ ನಟ ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್​ ಮುಖ್ಯಭೂಮಿಕೆಯಲ್ಲಿ ಅಭಿನಯದ 'ಫ್ಯಾಮಿಲಿ ಸ್ಟಾರ್' ಚಿತ್ರವು ಇದೇ ಏಪ್ರಿಲ್ 5, 2024ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ಪರಶುರಾಮ್ ಪೆಟ್ಲಾ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್​ ಆಪ್ತ ಸ್ನೇಹಿತೆ ನಟಿ ರಶ್ಮಿಕಾ ಮಂದಣ್ಣ ಒಂದು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಮುಗಿಸಿರುವ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಲಭಿಸಿದ್ದೇ ಆದರೂ ಸಿನಿಮಾದ ಒಟ್ಟು ರನ್​ಟೈಮ್​ ಅವಧಿಯೊಳಗೆ ಕೇಳಿಬರುವ ಸುಮಾರು ಐದು ಕೆಟ್ಟ ಪದಗಳನ್ನು ಮ್ಯೂಟ್ ಮಾಡಲು ಸೆನ್ಸಾರ್ ಮಂಡಳಿ ಚಿತ್ರ ತಯಾರಕರಿಗೆ ಸೂಚನೆ ನೀಡಿದೆ ಎಂದು ಇತ್ತೀಚಿನ ಸಿನಿ ವರದಿ ಮಾಹಿತಿ ಹಂಚಿಕೊಂಡಿದೆ.

163 ನಿಮಿಷಗಳ ರನ್‌ಟೈಮ್‌ ಒಳಗೊಂಡ 'ಫ್ಯಾಮಿಲಿ ಸ್ಟಾರ್' ಸಿನಿಮಾದ ಟ್ರೇಲರ್​ ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಭಾರೀ ಭರವಸೆ ಮೂಡಿಸಿದ್ದು, ಮೃಣಾಲ್​-ವಿಜಯ್​ ದೇವರಕೊಂಡ ಜೋಡಿ ತೆರೆಮೇಲೆ ಮೋಡಿ ಮಾಡಲಿದೆಯಾ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ಉತ್ತಮ ಆರಂಭವನ್ನು ಹೊಂದುವ ನಿರೀಕ್ಷೆಯಿದೆ. ದಿಲ್ ರಾಜು ನಿರ್ಮಾಣದ ಈ ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ ನೀಡಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net