More

    ಅರುಣಾಚಲದಲ್ಲಿ ಮಲೆಯಾಳಿ ದಂಪತಿ ಜತೆ ಯುವತಿ ನಿಗೂಢ ಮೃತ್ಯು..ಮಾಟ ಮಂತ್ರಕ್ಕೆ ಬಲಿಯಾದರೇ!

    ಇಟಾನಗರ(ಅರುಣಾಚಲ ಪ್ರದೇಶ): ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದರೂ, ಉನ್ನತ ವ್ಯಾಸಂಗ ಮಾಡಿದವರನ್ನೂ ಮೂಢ ನಂಬಿಕೆಗಳು ದುರ್ಬಲರನ್ನಾಗಿಸುತ್ತವೆ.ಇದಕ್ಕೆ ಕೇರಳದ ಉನ್ನತ ಶಿಕ್ಷಣ ಪಡೆದಿದ್ದ ದಂಪತಿ ಮತ್ತು ಶಿಕ್ಷಕಿಯಾಗಿದ್ದ ಯುವತಿ ದೂರದ ಅರುಣಾಚಲ ಪ್ರದೇಶದಲ್ಲಿ ಮೃತಪಟ್ಟಿರುವುದನ್ನು ಉದಾಹರಿಸಬಹುದು.

    ಇದನ್ನೂ ಓದಿ: ಭಾರತದ ಆರ್ಥಿಕ ವೃದ್ಧಿ ಶೇ.7.5ಕ್ಕೆ ಏರಿಕೆ! ಶ್ರೀಲಂಕಾ, ಪಾಕ್​, ಬಾಂಗ್ಲಾ ಸ್ಥಿತಿ ಏನಾಗಲಿದೆ? ವಿಶ್ವ ಬ್ಯಾಂಕ್‌ ಹೇಳಿದ್ದೇನು?

    ಅರುಣಾಚಲ ಪ್ರದೇಶದ ಇಟಾನಗರದ ವಸತಿ ಗೃಹದಲ್ಲಿ ಕೇರಳದ ಕೊಟ್ಟಾಯಂನ ದಂಪತಿ ನವೀನ್ ಮತ್ತು ದೇವಿ, ಶಿಕ್ಷಕಿ ಆರ್ಯಾ ಶವಗಳು ಕಂಡುಬಂದಿದ್ದು, ಇವರ ಸಾವಿನ ಕುರಿತು ಹಲವು ಅನುಮಾನಗಳು ಹುಟ್ಟಿಕೊಂಡಿವೆ.

    ಮಾರ್ಚ್ 17ರಂದು ನವೀನ್ ಮತ್ತು ದೇವಿ ಕೊಟ್ಟಾಯಂನ ಮೀನತ್‌ನಿಂದ ತಿರುವನಂತಪುರ ತಲುಪಿದ್ದು, ಶಿಕ್ಷಕಿ ಆರ್ಯಾ ಶಾಲೆಗೆ ಒಂದು ವಾರ ರಜೆ ಹಾಕಿ ಇವರ ಜೊತೆ ಸೇರಿಕೊಂಡಿದ್ದಾಳೆ. ಮಾರ್ಚ್ 27ರಂದು ಮೂವರೂ ತಿರುವನಂತಪುರಂ ಮೂಲಕ ಕೋಲ್ಕತ್ತಾಗೆ ಹೋಗಿದ್ದಾರೆ. ಅಲ್ಲಿಂದ ಗುವಾಹಟಿ ಮೂಲಕ ಇಟಾನಗರಕ್ಕೆ ಬಂದಿದ್ದಾರೆ. ಮಾರ್ಚ್ 28 ರಂದು ಅಲ್ಲಿಂದ 120 ಕಿಮೀ ದೂರದಲಿರುವ ಸಿರೋ ಎಂಬ ಪ್ರವಾಸಿ ತಾಣದಲ್ಲಿರುವ ಹೋಟೆಲ್‌ಗೆ ತೆರಳಿ ಒಂದೇ ರೂಂ ಪಡೆದು ತಂಗಿದ್ದಾರೆ. ಮಾರ್ಚ್ 29 ರಂದು ಮವರು ಹೋಟೆಲ್‌ನಿಂದ ಮಾರುಕಟ್ಟೆಗೆ ಹೋದ ನಂತರ ಕೋಣೆಗೆ ಮರಳಿದ್ದಾರೆ. ಆದರೆ ರೂನಿಂದ ಯಾರೊಬ್ಬರೂ ಹೊರಗೆ ಬಾರದಿದ್ದಾಗ ಏಪ್ರಿಲ್ 2 ರಂದು ಬೆಳಗ್ಗೆ 11.30 ಕ್ಕೆ, ಅರುಣಾಚಲ ಪ್ರದೇಶ ಪೊಲೀಸರಿಗೆ ಹೋಟೆಲ್​ ಸಿಬ್ಬಂದಿ ತಿಳಿಸಿದ್ದು, ಪರಿಶೀಲಿಸಿದಾಗ ಮೂವರೂ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

    ನವೀನ್ ಮತ್ತು ಅವರ ಪತ್ನಿ ಆಯುರ್ವೇದ ವೈದ್ಯರು. ಅವರು ಮದುವೆಯಾಗಿ 13 ವರ್ಷಗಳಾಗಿವೆ. ಆದರೆ ಈ ದಂಪತಿ ಮಾಟಮಂತ್ರವನ್ನು ನಂಬಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಈ ನಡುವೆ ನವೀನ್ ಕೇಕ್ ವ್ಯಾಪಾರ ಆರಂಭಿಸಿದ್ದ. ಮನೆಯಲ್ಲಿ ದಂಪತಿ ಹೆಚ್ಚಾಗಿ ಮೌನಕ್ಕೆ ಶರಣಾಗುತ್ತಿದ್ದರು.

    ಆದರೆ, ಆರ್ಯ ಅವರಿಬ್ಬರಿಗಿಂತ ಚಿಕ್ಕವಳು. ಆಕೆಗೆ ಮುಂದಿನ ತಿಂಗಳು ಮದುವೆ ನಿಶ್ಚಿತವಾಗಿತ್ತು. ಈ ನಡುವೆ ಆಕೆಯೂ ಅವರ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿರುವುದು ಮೂಢನಂಬಿಕೆ, ಮಾಟಮಂತ್ರದ ಪ್ರಯೋಗಗಳೇ ಕಾರಣ ಎನ್ನುತ್ತಾರೆ ಸ್ಥಳೀಯರು.

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಈ ನಿಗೂಢ ಸಾವುಗಳ ಹಿಂದಿನ ನಿಜವಾದ ಕಾರಣಗಳು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

    ಚುನಾವಣೆಗೂ ಮುನ್ನ ಹೈಕೋರ್ಟ್​ನಲ್ಲಿ ಆಂಧ್ರ ಸರ್ಕಾರಕ್ಕೆ ಆಘಾತ! ಪಿಂಚಣಿ ವಿತರಣೆ ಕುರಿತು ನ್ಯಾಯಾಲಯ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts