ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಹೋದರನ ಮನೆಯಲ್ಲಿ ಐದೂವರೆ ಕೆಜಿ ಚಿನ್ನ ಕಳವು

Rockline venkatesh
Published on

ಬೆಂಗಳೂರು: ಚಲನಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಹೋದರನ ಮನೆಯಲ್ಲಿ ಐದೂವರೆ ಕೆ.ಜಿ. ಚಿನ್ನಾಭರಣ ಸೇರಿ 3 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕಳ್ಳರು ದೋಚಿದ್ದಾರೆ.

ಮಹಾಲಕ್ಷ್ಮೀ ಲೇಔಟ್‌ನ ನಾಗಪುರ ವಾರ್ಡ್‌ನ 7ನೇ ಮುಖ್ಯರಸ್ತೆ ನಿವಾಸಿ ಉದ್ಯಮಿ ಟಿ.ಎನ್. ಭ್ರಮರೇಶ್ (58) ಮನೆಯಲ್ಲಿ ಕಳ್ಳತನವಾಗಿದೆ. ಈ ಕುರಿತು ಮಹಾಲಕ್ಷ್ಮೀಪುರ ಠಾಣೆಗೆ ದೂರು ಸಲ್ಲಿಸಿದ್ದು, ಇದರ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭ್ರಮರೇಶ್ ಅ. 21ರ ರಾತ್ರಿ ಕುಟುಂಬಸಮೇತ ಗ್ರೀಸ್ ದೇಶಕ್ಕೆ ಪ್ರವಾಸಕ್ಕೆ ಹೋಗಿ ಅ. 29ರ ಬೆಳಗ್ಗೆ ಹಿಂತಿರುಗಿದ್ದಾರೆ. ಮನೆಗೆ ಪ್ರವೇಶಿಸಿದಾಗ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿತ್ತು. 2ನೇ ಮತ್ತು 3ನೇ ಮಹಡಿಯನ್ನು ಪರಿಶೀಲಿಸಿದಾಗ ಕಳ್ಳರು ರೂಮ್‌ನ ಡೋರ್ ಲಾಕ್ ಮುರಿದು ಲಾಕರ್‌ಗಳನ್ನು ಒಡೆದು ಚಿನ್ನಾಭರಣ, ವಜ್ರ, ಬೆಲೆ ಬಾಳುವ ವಾಚ್ ಸೇರಿ 5 ಕೆಜಿ 457 ಗ್ರಾಂ ಚಿನ್ನಾಭರಣ ಮತ್ತು 6.10 ಲಕ್ಷ ರೂ. ನಗದು ಸೇರಿ 3 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅದಾವತ್ ಭೇಟಿ ಕೊಟ್ಟು ಸ್ಥಳಕ್ಕೆ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಞರು ತೆರಳಿ ಸಾಕ್ಷಾೃಧಾರಗಳನ್ನು ಸಂಗ್ರಹ ಮಾಡಿದ್ದಾರೆ. ಆರೋಪಿಗಳ ಬಂಧನಕ್ಕೆ ಆರು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net