ಕೆ.ಸಿ.ವ್ಯಾಲಿ ಎರಡನೇ ಹಂತದ ಮೊದಲ ಪಂಪ್‌ಹೌಸ್ ಸಜ್ಜು| Treated water is filled into lakes

K C Valley project
Published on

ಬೆಂಗಳೂರು: ಮಳೆಯಾಶ್ರಿತ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ತುಂಬಿಸಲು ಉದ್ದೇಶಿತ ಕೆ.ಸಿ.ವ್ಯಾಲಿ ಎರಡನೇ ಹಂತದ ಮೊದಲ ಲಕ್ಷ್ಮೀಸಾಗರದ ಪಂಪ್ ಹೌಸ್ 9ರಂದು ಲೋಕಾರ್ಪಣೆಯಾಗಿದೆ.

ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲೇ ವಿಡಿಯೋ ಸಂವಾದ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಬೆಳಗ್ಗೆ 11ಕ್ಕೆ ಚಾಲನೆ ನೀಡಲಿದ್ದಾರೆ. ಆ ಮೂಲಕ ಮೊದಲ ಪಂಪ್ ಹೌಸ್‌ನಡಿ 30 ಕೆರೆಗಳಿಗೆ ಸಂಸ್ಕರಿಸಿದ ನೀರು ಭರ್ತಿ ಮಾಡಲಾಗುತ್ತದೆ.

ಲಕ್ಷ್ಮೀಸಾಗರದ ಪಂಪ್‌ಹೌಸ್‌ನಿಂದ ಕೋಲಾರ ತಾಲೂಕಿನ 11 ಕೆರೆಗಳಿಗೆ 5.28 ದಶಲಕ್ಷ ಲೀಟರ್, ಆರ್.ಪಿ.-2 ಬಿಡುಗಡೆ ಸ್ಥಳದಿಂದ 15 ಕೆರೆಗಳಿಗೆ 4.95 ದಶಲಕ್ಷ ಲೀಟರ್ ಹಾಗೂ ಆರ್.ಪಿ.-1 ಬಿಡುಗಡೆ ಸ್ಥಳದಿಂದ ನಾಲ್ಕು ಕೆರೆಗಳಿಗೆ ಒಂದು ದಶಲಕ್ಷ ಲೀಟರ್ ಸಂಸ್ಕರಿಸಿದ ನೀರು ತುಂಬಿಸಲಾಗುತ್ತದೆ.

446.23 ಕೋಟಿ ರೂ. ವೆಚ್ಚ

ಕೆ.ಸಿ.ವ್ಯಾಲಿ ಎರಡನೇ ಹಂತದ ಯೋಜನೆಯಡಿ ಕೋಲಾರ ಜಿಲ್ಲೆಯ ಐದು ತಾಲೂಕುಗಳ 222 ಕೆರೆಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ 50 ಕೆರೆಗಳನ್ನು ಸಂಸ್ಕರಿಸಿದ ನೀರಿನ ಶೇಕಡ ರಷ್ಟು ತುಂಬಲಾಗುತ್ತದೆ.

ಎರಡನೇ ಹಂತದ ಯೋಜನಾಗಾತ್ರ 446.23 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.ಒಟ್ಟು 272 ಕೆರೆಗಳ ಭರ್ತಿಗಾಗಿ 221 ಕಿ.ಮೀ. ಉದ್ದದ ಕೊಳವೆ ಮಾರ್ಗ ಪೈಕಿ 177 ಕಿ.ಮೀ. ಕಾಮಗಾರಿ ಮುಗಿದಿದೆ. ಎರಡನೇ ಹಂತದ ಎಲ್ಲ ಕಾಮಗಾರಿಗಳನ್ನು ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ಪೂರ್ಣಗೊಳಿಸುವ ಗುರಿಯಿರಿಸಿಕೊಳ್ಳಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಮೂಲಗಳು ಮಾಹತಿ ನೀಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net