ಇವರೇ ನೋಡಿ Bigg Boss​ ಮನೆಯಿಂದ Eliminate ಆದ ಮೊದಲ ಸ್ಫರ್ಧಿ

BBK 11
Published on

ಬೆಂಗಳೂರು: ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ನ (Bigg Boss) 11 ಆವೃತ್ತಿ ಶುರುವಾಗಿ ಒಂದು ವಾರಗಳಾಗಿದ್ದು, ಈ ಬಾರಿ ಸ್ವರ್ಗ-ನರಕ (Hell-Heaven) ಎಂಬ ಥೀಮ್​ನಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈಗಾಗಲೇ ಸ್ಫರ್ಧಿಗಳ ನಡುವಿನ ಜಗಳದ ವಿಚಾರವಾಗಿ ಹೆಚ್ಚು ಸದ್ದು ಮಾಡಿದ್ದ ಬಿಗ್​ಬಾಸ್ ಇದೀಗ ಎಲಿಮಿನೇಷನ್​ (Eliminate) ವಿಚಾರವಾಗಿಯೂ ಎಲ್ಲರ ಗಮನ ಸೆಳೆಯುತ್ತಿದೆ.

ಬಿಗ್​ ಬಾಸ್​ (Bigg Boss) 11ನೇ ಆವೃತ್ತಿಯ ಮೊದಲ ವಾರದ ನಾಮಿನೇಷನ್​ನಲ್ಲಿ (Nomination) ಗೌತಮಿ ಜಾಧವ್​, ಭವ್ಯಾ ಗೌಡ, ಮಾನಸ ಸಂತೋಷ್​, ಹಂಸ ಪ್ರತಾಪ್​, ಚೈತ್ರಾ ಕುಂದಾಪುರ, ಯಮುನಾ ಶ್ರೀನಿಧಿ, ಮೋಕ್ಷಿತಾ ಪೈ, ಶಿಶಿರ್​ ಶಾಸ್ತ್ರಿ, ಜಗದೀಶ್​ ನಾಮಿನೇಟ್​ ಆಗಿದ್ದರು. ಈ ಪೈಕಿ ಗೌತಮಿ, ಭವ್ಯಾ ಹಾಗೂ ಮನಸ ಅವರನ್ನು ಶನಿವಾರದ ಸಂಚಿಕೆಯಲ್ಲಿ ಸೇವ್​​ ಮಾಡಲಾಗಿದೆ. ಹಂಸ ಪ್ರತಾಪ್​, ಚೈತ್ರಾ ಕುಂದಾಪುರ, ಯಮುನಾ ಶ್ರೀನಿಧಿ, ಮೋಕ್ಷಿತಾ ಪೈ, ಶಿಶಿರ್​ ಶಾಸ್ತ್ರಿ, ಜಗದೀಶ್​ ಡೇಂಜರ್​ ಜೋನ್​ನಲ್ಲಿದ್ದು, ಈ ಪೈಕಿ ಒಬ್ಬರು ಎಲಿಮಿನೇಟ್​ ಆಗಿದ್ಧಾರೆ ಎಂದು ವರದಿಯಾಗಿದೆ.

Yamuna Srinidhi

ನಟಿ ಯಮುನಾ ಶ್ರೀನಿಧಿ, ಚೈತ್ರಾ ಕುಂದಾಪುರ ಹಾಗೂ ಜಗದೀಶ್​ ಪೈಕಿ ಒಬ್ರು ಎಲಿಮಿನೇಟ್​ ಆಗಿದ್ದು, ಬಲ್ಲ ಮೂಲಗಳ ಪ್ರಕಾರ ನಟಿ ಯಮುನಾ ಶ್ರೀನಿಧಿ ಎಲಿಮಿನೇಟ್​ ಆಗಿರುವ ಮೊದಲ ಕಂಟೆಸ್ಟಂಟ್​ ಎಂದು ಹೇಳಲಾಗಿದೆ. ಅತಿ ಕಡಿಮೆ ವೋಟ್​ ಪಡೆದಿರುವ ಕಾರಣ ಯಮುನಾ ಶ್ರೀನಿಧಿ (Yamuna Srinidhi) ಅವರನ್ನು ಎಲಿಮಿನೇಟ್ (Eliminate)​ ಮಾಡಲಾಗಿದೆ. ಆದರೆ, ಅಂತಿಮವಾಗಿ ಇಂದಿನ ಸಂಚಿಕೆ ಪ್ರಸಾರವಾಗುವರೆಗೂ ನಾವು ಕಾಯಬೇಕಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್ (Bigg Boss)​, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಪಾಪ್ಯೂಲರ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net