ರಾಜ್ಯದಲ್ಲಿ 6ಕ್ಕೆ ಏರಿತು ಕರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ: ಗದಗದಲ್ಲಿ ಮೊದಲ ಮರಣ ಪ್ರಕರಣ

carona logo
Published on

ಗದಗ: ಕರೊನಾ ಸೋಂಕು ದಿನೇದಿನೆ ಹೆಚ್ಚು ತೀವ್ರಗೊಳ್ಳುತ್ತಿದ್ದು, COVID19 ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಗದಗ ಜಿಲ್ಲೆಯಲ್ಲಿ ಈ ಸೋಂಕಿಗೆ ಮೊದಲ ಮರಣ ಪ್ರಕರಣ ದಾಖಲಾಗಿದ್ದು. ಇದರೊಂದಿಗೆ ರಾಜ್ಯದಲ್ಲಿ ಈ ಸೋಂಕಿಗೆ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಗದಗದಲ್ಲಿ ಮೃತಪಟ್ಟಿರುವುದು 80 ವರ್ಷ ಪ್ರಾಯದ ಮಹಿಳೆ. ಈ ವೃದ್ಧೆ ಗದಗ ನಗರದ ರಂಗನವಾಡಿ ಗಲ್ಲಿಯವರು. ಸೋಂಕಿನ ಗುಣಲಕ್ಷಣಗಳು ಇದ್ದಾಗಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ 12.55ಕ್ಕೆ ಈ ವೃದ್ಧೆ ಕೊನೆಯುಸಿರೆಳೆದಿದ್ದಾರೆ.

ಕಾರ್ಡಿಯಾಕ್ ಅರೆಸ್ಟ್​ನಿಂದಾಗಿ ಸಾವು ಸಂಭವಿಸಿದೆ. ಇವರನ್ನು ಪಿ-166 ಎಂದು ಗುರುತಿಸಲಾಗಿದ್ದು, ಏಪ್ರಿಲ್ 4ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 7 ರಂದು ವೃದ್ದೆಗೆ ಸೋಂಕು ದೃಢಪಟ್ಟಿರುವ ವರದಿಯಾಗಿತ್ತು. ವೃದ್ಧೆಯ ಸಂಪರ್ಕದಲ್ಲಿದ್ದವರ ಮೇಲೂ ನಿಗಾವಹಿಸಿದ್ದು, ಅವರಲ್ಲಿ ಹಲವರ ವರದಿ ನೆಗೆಟಿವ್ ಬಂದಿದೆ. ಆದಾಗ್ಯೂ, ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ‌ ಜಿ ಹಿರೇಮಠ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net