

ನ್ಯೂಯಾರ್ಕ್: ಕರೊನಾ ಸೋಂಕು, ಆನಂತರ ಒಮಿಕ್ರಾನ್ ಹೀಗೆ ಸಾಂಕ್ರಾಮಿಕ ರೋಗಗಳಿಗೇನು ಕಡಿಮೆಯಿಲ್ಲ. ಎರಡು ವರ್ಷಗಳಿಂದ ಶತಮಾನದಲ್ಲೇ ಕಾಣದ ಬಿಕ್ಕಟ್ಟಿನಿಂದ ಹೊರ ಬರುತ್ತಿರುವಾಗಲೇ ಮತ್ತೊಂದು ಸೋಂಕು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ.
ಹೀಗೊಂದು ಪ್ರಕರಣ ಅಮೆರಿಕದಲ್ಲಿ ದಾಖಲಾಗಿರುವುದು ವರದಿಯಾಗಿದೆ. ಇದು ಕರೊನಾ ತಳಿಗಳಿಗಿಂತಲೂ ದುಪ್ಪಟ್ಟು ಭೀಕರತೆ ಸೃಷ್ಟಿಸುವ ವೈರಸ್ ಆಗಿದೆ ಎಂದು ಹೇಳಲಾಗಿದೆ. ಸದ್ಯ ಮೊದಲ ಪ್ರಕರಣ ಅಮೆರಿಕದಲ್ಲಿಕಂಡುಬಂದಿದೆ.
ಇದರ ಹೆಸರು ಮಂಕಿಪಾಕ್ಸ್ ಈ ವೈರಸ್. ವ್ಯಕ್ತಿಯೊಬ್ಬನನ್ನು ಪರೀಕ್ಷೆಗೊಳಪಡಿಸಿದಾಗ ಈ ವೈರಸ್ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಇನ್ನು ಇದು ಚಿಕನ್ಪಾಕ್ಸ್ ರೀತಿಯಲ್ಲೇ ಇರಲಿದ್ದು, ಕೈ ಕಾಲುಗಳ ಮೇಲೆ ಸಣ್ಣ ಗುಳ್ಳೆಗಳು ಬರಲಿದ್ದು, ಹೆಚ್ಚು ಸೆಳೆ ಹಾಗೂ ನೋವು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.
ಇದೂ ಕೂಡ ಕರೊನಾ ಮಾದರಿಯಲ್ಲೇ ಹರಡಲಿದ್ದು, ಸೋಂಕಿಗೊಳಗಾದ ವ್ಯಕ್ತಿ ಮುಖಾಮುಖಿ ಸಂಪರ್ಕ, ಗಾಳಿಯಲ್ಲಿ ವೈರಸ್ ಹರಡುವಿಕೆ ಹಾಗೂ ಉಸಿರಾಟದ ಹನಿಗಳಿಂದ ರೋಗ ತಗಲುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.ಈ ವ್ಯಕ್ತಿ ಕೆನಡಾದಿಂದ ಬಂದಿದ್ದ ಬೋಸ್ಟನ್ ನಗರಕ್ಕೆ ಬಂದಿದ್ದ. ಈ ವೇಳೆ ಕರೊನಾ ಪರೀಕ್ಷೆ ಮಾಡಿಸಲು ತಪಾಸಣೆಗೊಳಪಡಿಸಲಾಗಿತ್ತು. ಆಗ ಈ ಸತ್ಯಾಂಶ ಹೊರಬಂದಿದೆ.
ಸದ್ಯ ಈ ವ್ಯಕ್ತಿಯನ್ನು ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದು ಕರೊನಾ ಅಂತೆಯೇ ಹರಡುತ್ತದೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಈ ಬಗ್ಗೆ ಪರೀಕ್ಷೆಗೊಳಪಡಿಸಲಾಗಿದೆ ಎಂದು ಇಲ್ಲಿನ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. 2003ರಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದವು. ಆನಂತರ ಇದೇ ಮೊದಲ ಬಾರಿಗೆ ಈ ವೈರಸ್ ಪತ್ತೆಯಾಗಿದೆ.ಪೋರ್ಚುಗಲ್ನ ಐವರು ಸೇರಿ ಒಟ್ಟು 9 ಮಂದಿಯಲ್ಲಿ ಮಾತ್ರ ಈ ವೈರಸ್ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)