ಪಂಜಾಬ್‌ ಸೇನಾ ನೆಲೆ ಪ್ರವೇಶಕ್ಕೆ ಉಗ್ರರ ಯತ್ನ: ನಾಲ್ವರನ್ನು ಹೊಡೆದುರುಳಿಸಿದ ಸೇನೆ...

military
Published on

ಪಂಜಾಬ್​: ಪಂಜಾಬ್‌ ಸೇನಾ ನೆಲೆ ಪ್ರವೇಶಕ್ಕೆ ಯತ್ನಿಸುತ್ತಿರುವ ಉಗ್ರರರಲ್ಲಿ ನಾಲ್ವರನ್ನು ಪಂಜಾಬ್​​ ಸೇನೆ ಹೊಡೆದುರುಳಿಸಿದೆ.

ಪಂಜಾಬ್‌ನ ಭತಿಂಡಾ ಮಿಲಿಟರಿ ನೆಲೆಯ ಒಳಗೆ ಇಂದು ಮುಂಜಾನೆ ಸಂಭವಿಸಿದ ಗುಂಡಿನ ದಾಳಿದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನೆಯ ನೈಋತ್ಯ ಕಮಾಂಡ್‌ ಹೇಳಿದ್ದಾರೆ. ಬೆಳಗ್ಗೆ 4.35ರ ಹೊತ್ತಿಗೆ ಮಿಲಿಟರಿ ನೆಲೆಯ ಒಳಗೆ ಗುಂಡಿನ ದಾಳಿ ನಡೆದಿದೆ.

ಪ್ರದೇಶದ ಒಳಗೆ ಯಾರೋ ಅಪರಿಚಿತರು ಪ್ರವೇಶ ಮಾಡಿದ್ದನ್ನು ಅರಿತ ಕೂಡಲೇ ತುರ್ತು ಪ್ರತಿರೋಧ ತಂಡಗಳು ಕಾರ್ಯಾಚರಣೆಗೆ ಇಳಿದವು. ಶೋಧ ಕಾರ್ಯಾಚರಣೆ ಈಗಲೂ ಮುಂದುವರಿಯುತ್ತಿವೆ ಎಂದು ಸೇನೆ ತಿಳಿಸಿದೆ.

ಉಗ್ರರಿಗಾಗಿ ಶೋಧ: ಸಂರಕ್ಷಿತ ಕ್ಯಾಂಪಸ್‌ನ ಒಳಗೆ ಯಾರೋ ಬಂದಿದ್ದನ್ನು ಅರಿತು ಸೇನಾ ಯೋಧರೊಬ್ಬರು ಗುಂಡಿನ ದಾಳಿ ನಡೆಸಿದ್ದರೆ ಎಂದು ಬತಿಂಡಾದ ಎಸ್‌ಎಸ್‌ಪಿ ಗುಲ್‌ನೀತ್‌ ಖುರಾನಾ ತೀಳಿಸಿದ್ದಾರೆ. ಘಟನೆಯ ಹೆಚ್ಚಿನ ವಿವರ ತಿಳಿದುಬಂದಿಲ್ಲ.‘

ಈ ಘಟನೆಯ ನಂತರ ಸ್ಟೇಷನ್ ಕ್ವಿಕ್ ರಿಯಾಕ್ಷನ್ ತಂಡಗಳನ್ನು ಸಕ್ರಿಯಗೊಳಿಸಲಾಗಿದೆ. ಸುತ್ತಮುತ್ತಲಿನ ಪ್ರದೇಶವನ್ನು ಸುತ್ತುವರೆದಿದೆ ಮತ್ತು ಸೀಲ್ ಮಾಡಲಾಗಿದೆ. ಶೋಧ ಕಾರ್ಯಗಳು ಪ್ರಗತಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net