ಫ್ರೀಡಂಪಾರ್ಕ್‌ಗೆ ಪಟಾಕಿ ಮಳಿಗೆ ಶಿಫ್ಟ್

freedam park pataki shops
ಫ್ರೀಡಂಪಾರ್ಕ್‌ನಲ್ಲಿ ಪಟಾಕಿ ಖರೀದಿಸಿದ ಮಹಿಳೆ.
Published on

ಶಿವಮೊಗ್ಗ: ನಗರದ ಸೈನ್ಸ್ ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಇದುವರೆಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಈ ಬಾರಿ ಪಟಾಕಿ ಮಳಿಗೆಗಳು ಫ್ರೀಡಂಪಾರ್ಕ್‌ಗೆ ಶಿಫ್ಟ್ ಮಾಡಲಾಗಿತ್ತು.

84 ಮಳಿಗೆಗಳಿಗೆ ಪರವಾನಗಿ ನೀಡಿದ್ದು ಬುಧವಾರ ಮಧ್ಯಾಹ್ನವರೆಗೆ 69 ಮಳಿಗೆಗಳನ್ನು ಹಾಕಲಾಗಿತ್ತು. ಈ ಬಾರಿ ವಿಶೇಷವಾಗಿ ಮಕ್ಕಳ ಆಟಿಕೆ ವಸ್ತುಗಳನ್ನು ಆಡಲು ಕಲ್ಪಿಸಲಾಗಿದೆ. ಬೆಲೆ ಏರಿಕೆ ನಡುವೆಯೂ ಪಟಾಕಿ ಖರೀದಿ ಸಂಭ್ರಮ ಜೋರಾಗಿತ್ತು. ಮಲ್ಲಿಗೇನಹಳ್ಳಿಯಲ್ಲಿ ಗೋಡಾನ್ ಮಾಡಿಕೊಂಡಿರುವ ವ್ಯಾಪಾರಸ್ಥರು ಅಲ್ಲಿಂದ ಪಟಾಕಿ ತಂದು ಚಿಲ್ಲರೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

ಪಟಾಕಿ ದರ ಈ ಬಾರಿ ಶೇ.15ರಿಂದ 20ರಷ್ಟು ಹೆಚ್ಚಾಗಿದೆ. ಕೆಲವೊಂದು ಪಟಾಕಿ, ಫ್ಲವರ್ ಪಾಟ್ ಹೂವಿನಕುಂಡ, ಲಕ್ಷ್ಮೀ ಪಟಾಕಿ, ಸ್ಪಾರ್ಕಲೆಸ್ ಸುರುಸುರು ಬತ್ತಿಗಳ ದರ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಒಂದೊಂದು ಮಳಿಗೆಗಳಲ್ಲಿ ನಾನಾ ತರದ ಪಟಾಕಿಗಳ ಮಾರಾಟ ನಡೆದಿದ್ದು, ಸುರಸುರ ಬತ್ತಿ, ಹೂವಿನ ಬತ್ತಿ, ಆಕಾಶ ಬಾಣ ಹಾಗೂ ಇತರೆ ಪಟಾಕಿಗಳಿದ್ದವು. ಜನರು ವ್ಯಾಪಾರದಲ್ಲಿ ಚೌಕಾಸಿ ಮಾಡುತ್ತಿದ್ದರು. ದರ ಕಡಿಮೆ ಮಾಡುವವರ ಬಳಿ ಜನರು ಹೆಚ್ಚಾಗಿ ಹೋಗುತ್ತಿದ್ದರು. ನೂರರಿಂದ ಸಾವಿರಾರು ರೂ.ಗಳ ಪಟಾಕಿಗಳನ್ನು ಜನರು ಖರೀದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net