ಹುಲ್ಲು ಹೊತ್ತಿದ್ದ ಕ್ಯಾಂಟರ್​ಗೆ ವಿದ್ಯುತ್ ಸ್ಪರ್ಶ! ರಸ್ತೆ ಮಧ್ಯೆಯೇ ಹೊತ್ತಿ ಉರಿದ ಕ್ಯಾಂಟರ್!

fire
Published on

ಮಂಡ್ಯ: ತಾಲೂಕಿನ ಹೊಳಲು ಗ್ರಾಮದಲ್ಲಿ ಮಂಗಳವಾರ ರಾತ್ರಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಹುಲ್ಲಿನ ಸಮೇತ ಕ್ಯಾಂಟರ್ ರಸ್ತೆ ಮಧ್ಯೆಯೇ ಹೊತ್ತಿ ಉರಿದಿರುವ ಘಟನೆ ನಡೆದಿದೆ.

ಹೊಳಲು ಸಮೀಪದ ಜಮೀನಿನಿಂದ ಬೆಂಗಳೂರಿಗೆ ಒಣಹುಲ್ಲನ್ನು ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ಗ್ರಾಮದೊಳಕ್ಕೆ ಬಂದಾಗ ವಿದ್ಯುತ್ ತಂತಿ ತಗುಲಿದೆ. ಕ್ಷಣಾರ್ಧದಲ್ಲಿಯೇ ಬೆಂಕಿ ಹೊತ್ತಿಕೊಂಡು ಇಡೀ ಕ್ಯಾಂಟರ್ ಆವರಿಸಿದೆ. ಇತ್ತ ಸ್ಥಳೀಯರು ಕೂಗಿಕೊಂಡಿದ್ದರಿಂದ ಚಾಲಕ ಕ್ಯಾಂಟರ್ ನಿಲ್ಲಿಸಿದ್ದಾನೆ. ಬಳಿಕ ಸಹಾಯಕನೊಂದಿಗೆ ಕ್ಯಾಂಟರ್‌ನಿಂದ ಕೆಳಗೆ ಇಳಿದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸ್ಥಳೀಯರು ಬೆಂಕಿ‌ ನಂದಿಸಲು ಪ್ರಯತ್ನಿಸಿದರೂ ಅಷ್ಟರಲ್ಲಾಗಲೇ ಕ್ಯಾಂಟರ್ ಬೆಂಕಿಗೆ ಆಹುತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net