ಟೊಮ್ಯಾಟೊದಲ್ಲಿ ಸ್ಫೋಟಕ ವಸ್ತು! ಗಡಿಭಾಗದಲ್ಲಿ ಭರ್ಜರಿ ಕಾರ್ಯಾಚರಣೆ

Tomato Box
Published on

ಬೆಂಗಳೂರು: ಟೊಮ್ಯಾಟೊ ಬಾಕ್ಸ್​ನಲ್ಲಿ 7000 ಜಿಲೆಟಿನ್ ಸ್ಟಿಕ್​ಗಳು ಹಾಗೂ 7500 ಡಿಟೋನೇಟರ್​ಗಳು ಪತ್ತೆಯಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಟೊಮ್ಯಾಟೊ ಸಾಗಿಸುವ ನೆಪದಲ್ಲಿ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕೇರಳ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕೊಯಮತ್ತೂರ್​ನಿಂದ ಕೇರಳಕ್ಕೆ ಟೆಂಪೋದಲ್ಲಿ 30 ಬಾಕ್ಸ್​ ಟೊಮ್ಯಾಟೊ ಸಾಗಾಟ ಮಾಡಲಾಗುತ್ತಿತ್ತು. ಟೊಮ್ಯಾಟೊ ತುಂಬಿದ್ದ ಬಾಕ್ಸ್​ಗಳಲ್ಲಿ ಜಿಲೆಟಿನ್ ಸ್ಟಿಕ್, ಡಿಟೋನೇಟರ್​ಗಳನ್ನು ಬಚ್ಚಿಟ್ಟು ಟೆಂಪೋದಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯಿಂದ ಕೇರಳದ ಅಲುವಾಕ್ಕೆ ಕೊಂಡೊಯ್ಯಲಾಗುತ್ತಿತ್ತು.

ತಮಿಳುನಾಡು ಹಾಗೂ ಕೇರಳ ಗಡಿಭಾಗ ವಾಳಯಾರ್ ಚೆಕ್ ಪೋಸ್ಟ್ ಬಳಿ ಟೆಂಪೋವನ್ನು ಕೇರಳ ಪೊಲೀಸರು ಪರಿಶೀಲನೆ ನಡೆಸಿದಾಗ 7 ಬಾಕ್ಸ್​ನಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿವೆ. ಟೆಂಪೋ ಚಾಲಕ ಪ್ರಭು ಹಾಗೂ ಮತ್ತೋರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net