

ಭೋಪಾಲ್: ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿ ಇಂದೋರ್‌ನಲ್ಲಿ ಪೆಂಟ್ಹೌಸ್ ಮನೆಯ ಕೊಠಡಿಯೊಂದರಲ್ಲಿ ಇರಿಸಲಾಗಿದ್ದ ದೇವಾಲಯದ ಅಖಂಡ ಜ್ಯೋತಿಯಿಂದ ಉಂಟಾದ ಅಗ್ನಿ ಅವಘಡದಿಂದ ಉದ್ಯಮಿ, ಕಾಂಗ್ರೆಸ್ ನಾಯಕ ಪ್ರವೇಶ್ ಅಗರ್ವಾಲ್ ಉಸಿರುಗಟ್ಟಿ ಸಾವನ್ನಪ್ಪಿದ(Death) ಘಟನೆ ಗುರುವಾರ(ಅ. 23) ಮುಂಜಾನೆ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಕೋಣೆಯಲ್ಲಿದ್ದ ಅಖಂಡ ಜ್ಯೋತಿಯ ಮೂಲಕ ಬೆಂಕಿ ಬೆಂಕಿ ಹೊತ್ತಿಕೊಂಡಿದೆ. ಆ ನಿರ್ದಿಷ್ಟ ಕೊಠಡಿ ಮತ್ತು ಪಕ್ಕದ ಅಂಗಡಿ ಜಾಗದಲ್ಲಿದ್ದ ಆಸ್ತಿಗಳು ಸುಟ್ಟುಹೋಗಿವೆ. ಬೆಂಕಿಯಿಂದ ಹೊರಹೊಮ್ಮಿದ ಭಾರೀ ಹೊಗೆ ಇಡೀ ಪೆಂಟ್ಹೌಸ್ ಅನ್ನು ಆವರಿಸಿದೆ.
ಈ ವೇಳೆ ಮನೆಯಲ್ಲಿ ಪ್ರವೇಶ್ ಮತ್ತು ಅವರ ಪತ್ನಿ ಹಾಗೂ ಚಿಕ್ಕಮಗಳು ಒಂದು ಕೊಣೆಯಲ್ಲಿ ಮಲಗಿದ್ದರೆ, ಅವರ ಹಿರಿಯ ಮಗಳು ಇನ್ನೊಂದು ಕೊಣೆಯಲ್ಲಿ ಮಲಗಿದ್ದಾರೆ. ಈ ವೇಳೆ ಬೆಂಕಿ ಹೊಗೆ ಆವರಿಸಿಕೊಂಡಿದೆ. ಈ ವೇಳೆ ಮನೆಯ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ ಅವರ ಪತ್ನಿ ಶ್ವೇತಾ ಮತ್ತು ಮಗಳು ಮೈರಾಳನ್ನು ಸಕಾಲದಲ್ಲಿ ರಕ್ಷಿಸಿದ್ದಾರೆ.
ಇನ್ನೂ ಸ್ಥಳಕ್ಕೆ ಪೊಲೀಸರ ಆಗಮಿಸಿ ತಕ್ಷಣ ಭಾರಿ ಹೊಗೆಯಿಂದ ಪ್ರವೇಶ ಅವರನ್ನು ಹೊರ ತಂದು ಆಸ್ಪತ್ರೆಗೆ ದಾಖಲಿಸಿದ್ರು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಹಿರಿಯ ಮಗಳನ್ನು ಬಾಂಬೆ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹೀಂದ್ರಾ ಶೋ ರೂಂನ ಮಾಲೀಕರಾದ ಪ್ರವೇಶ್ ಅಗರ್ವಾಲ್ ಕಾಂಗ್ರೆಸ್ ನಾಯಕರಾಗಿದ್ದು, ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್ ಅವರ ಆಪ್ತರಾಗಿದ್ದರು. ಅಗರ್ವಾಲ್ ನಿಧನಕ್ಕೆ ಎಕ್ಸ್ನಲ್ಲಿ ಕಮಲ್ನಾಥ್ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್)