ವಿಜಯವಾಡದ ಗನ್ನವರಂ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ; ಕಸ್ಟಮ್ಸ್ ವಿಭಾಗಕ್ಕೆ ಹಾನಿ| Fire

ವಿಜಯವಾಣಿ - 2025-10-28T180009.602
Published on

ವಿಜಯವಾಡ: ಆಂಧ್ರ ಪ್ರದೇಶದ ವಿಜಯವಾಡ ಬಳಿಕ ಗನ್ನವರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ(ಅ. 28) ಬೆಂಕಿ(Fire) ಕಾಣಿಸಿಕೊಂಡಿದ್ದು, ಕಸ್ಟಮ್ಸ್ ವಿಭಾಗದಲ್ಲಿ ಸಂಗ್ರಹಿಸಲಾಗಿದ್ದ ಉಪಕರಣಗಳು ಮತ್ತು ಲಗೇಜ್‌ಗಳು ಹಾನಿಯಾಗಿವೆ ಎಂದು ವರದಿಯಾಗಿದೆ.

ವಿಮಾನ ನಿಲ್ದಾಣದ ಅಧಿಕಾರಿಗಳ ಮಾಹಿತಿ ಪ್ರಕಾರ,  ಕಸ್ಟಮ್ಸ್ ಅಧಿಕಾರಿಗಳ ಕೋಣೆಯಲ್ಲಿ ಈ ಘಟನೆ ನಡೆದಿದೆ. ಇಮಿಗ್ರೇಷನ್ ವಿಭಾಗದ ಹತ್ತಿರದ ಕೋಣೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ನಂತರ ಕಸ್ಟಮ್ಸ್ ಕಚೇರಿಯ ಹತ್ತಿರದ ಪ್ರದೇಶಗಳಿಗೆ ಹರಡಿದೆ ಎಂದು ಹೇಳಿದ್ದಾರೆ.

ಬೆಂಕಿಯಲ್ಲಿ ಸಾಫ್ಟ್‌ವೇರ್ ಉಪಕರಣಗಳು, ವಲಸೆ ಕೊಠಡಿಯಲ್ಲಿನ ಸ್ಪ್ಲಿಟ್ ಏರ್ ಕಂಡಿಷನರ್ ಹಾಗೂ ಕಸ್ಟಮ್ಸ್ ಅಧಿಕಾರಿಗಳಿಗೆ ಸೇರಿದ ಲಗೇಜ್ ಬ್ಯಾಗ್‌ಗಳು ಸುಟ್ಟುಹೋಗಿವೆ. ಸ್ಥಳಕ್ಕೆ ವಿಮಾನ ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net