

ರಾಯಚೂರು: ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ (ವೈಟಿಪಿಎಸ್) ಕಲ್ಲಿದ್ದಲು ಸಾಗಣೆ ವಿಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಲಕ್ಷಾಂತರ ರೂ. ಮೌಲ್ಯದ ಕಲ್ಲಿದ್ದಲು ಸಾಗಣೆ ಬೆಲ್ಟ್ ಮತ್ತು ಇತರ ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾಗಿವೆ.
ಕಲ್ಲಿದ್ದಲು ಯಾರ್ಡ್‌ನಲ್ಲಿ ಬಿಸಿಲಿನ ತಾಪಕ್ಕೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಅದನ್ನು ಆರಿಸಿ ಘಟಕಕ್ಕೆ ರವಾನೆ ಮಾಡಬೇಕು. ಬೆಂಕಿ ನಂದಿಸದೆ ಕಲ್ಲಿದ್ದಲು ಬೆಲ್ಟ್ ಮೇಲೆ ಹೋಗಲು ಬಿಟ್ಟಿದ್ದರಿಂದ ಭಾನುವಾರ ರಾತ್ರಿ ಬೆಲ್ಟ್ ಹೊತ್ತಿ ಉರಿದಿದೆ. ಮತ್ತೊಂದು ಕಲ್ಲಿದ್ದಲು ಸಾಗಣೆ ಮಾರ್ಗದಿಂದ ಕೇಂದ್ರಕ್ಕೆ ಕಲ್ಲಿದ್ದಲು ರವಾನೆ ಮಾಡಲಾಗುತ್ತಿದೆ. ಸುಟ್ಟಿರುವ ಬೆಲ್ಟ್ ದುರಸ್ತಿ ಕಾರ್ಯ ನಡೆಯುತ್ತಿದೆ.
ಇದನ್ನೂ ನೋಡಿ