

ಹುಣಸೂರು : ತಾಲೂಕಿನ ಗಾವಡಗೆರೆ ಹೋಬಳಿಯ ಮಾರಗೌಡನಹಳ್ಳಿಯ ಬಳಿ ಆಕಸ್ಮಿಕ ಬೆಂಕಿ ತಗುಲಿ ಎರಡು ಎಕರೆ ಜಮೀನಿನಲ್ಲ್ಲಿ ಬೆಳೆದು ನಿಂತಿದ್ದ ತೆನೆಸಹಿತ ಭತ್ತದ ಫಸಲು ಸುಟ್ಟು ಭಸ್ಮವಾಗಿದೆ.ಗಾವಡಗೆರೆಯ ಸತ್ಯವತಿಬಾಯಿ ಅವರ ಜಮೀನಿನಲ್ಲಿ ಮಂಗಳವಾರ ಸಂಜೆ ಕಟಾವು ಮಾಡಿದ ಭತ್ತ ಮತ್ತು ರಾಗಿಯ ಮೆದೆಗೆ ವಿದ್ಯುತ್ ತಂತಿ ತಲುಗಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ, ಅಕ್ಕಪಕ್ಕದ ಜಮೀನಿನ ಬೆಳೆಗಳಿಗೆ ಹಾನಿಯಾಗದಂತೆ ಕ್ರಮ ವಹಿಸಿದ್ದಾರೆ.