ಕನ್ನಡಿಗರನ್ನು ಕೆರಳಿಸಿದ್ದ ಗಾಯಕ ಸೋನು ನಿಗಮ್​ ವಿರುದ್ಧ ಪ್ರಕರಣ ದಾಖಲು! | FIR

dk - 2025-05-03T180153.051
Published on

FIR: ಬೆಂಗಳೂರಿನ ಕಾಲೇಜೊಂದರಲ್ಲಿ ನಡೆದ ಈವೆಂಟ್​ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್​ 'ಕನ್ನಡ ಹಾಡು ವಿನಂತಿ ಮಾಡಿದಕ್ಕೆ ಪಹಲ್ಗಾಮ್‌ನಲ್ಲಿ ಆಗಿದ್ಯಲ್ಲ.. ಅದಕ್ಕೆ ಇದೇ ಕಾರಣ ಎಂದಿದ್ದರು. ಇದೀಗ ಈ ವಿಚಾರಕ್ಕೆ ಸಬಂಧಪಟ್ಟಂತೆ ಸೋನು ವಿರುದ್ಧ ಬೆಂಗಳೂರಿನಲ್ಲಿ ಶನಿವಾರ ಕೇಸ್ ದಾಖಲಾಗಿದೆ.

ಹೌದು, ಬೆಂಗಳೂರಿನ ಅವಲಹಳ್ಳಿ ಪೊಲೀಸ್​ ಠಾಣೆಯಲ್ಲಿ ಸೋನು ವಿರುದ್ಧ ಎಫ್​ಐಆರ್ ದಾಖಲಾಗಿದೆ. ನಿನ್ನೆಯಷ್ಟೇ ಕರವೇ ತಂಡ ಅವಲಹಳ್ಳಿ ಠಾಣೆ ಭೇಟಿ ನೀಡಿ ದೂರಿಗೆ ಒತ್ತಾಯಿಸಲಾಗಿತ್ತು. ವಿಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು (NS 351(1)), ಕನ್ನಡಿಗ ಸಮುದಾಯದ ಸಾಂಸ್ಕೃತಿಕ ಅಥವಾ ಭಾಷಿಕ ವ್ಯಕ್ತಿಗಳ ಮೇಲೆ ಪರಿಣಾಮ, (BNS 352(2)) ಹಾಗೂ BNS 353 ಧಾರ್ಮಿಕ ಅಥವಾ ಭಾಷಿಕ ಭಾವನೆಗಳನ್ನು ಕೆರಳಿಸುವುದು. ಈ ಮೂರು ಸೆಕ್ಷನ್‌ ಅಡಿಯಲ್ಲಿ ಕೇಸ್‌ ದಾಖಲಾಗಿದೆ.

ಸೋನು ನಿಗಮ್​ ಹೇಳಿದ್ದೇನು..?

ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿ ಸೋನ್​ ನಿಗಮ್​ ಗಾಯನ ಮಾಡುತ್ತಿದ್ದ ಸಮಯದಲ್ಲಿ ಕೆಲವರು, ಕನ್ನಡ, ಕನ್ನಡ(ಕನ್ನಡ ಹಾಡು ಹೇಳಿ) ಎಂದಿದ್ದಕ್ಕೆ ಸೋನು ನಿಗಮ್​ ಏಕಾಏಕಿ ಗರಂ ಆಗಿದ್ದಾರೆ. ಮುಂದುವರೆದು, ''ಕನ್ನಡ.. ಕನ್ನಡ.. ಇದೇ ಕಾರಣ.. ಪಹಲ್ಗಾಮ್‌ನಲ್ಲಿ ಆಗಿದ್ಯಲ್ಲ.. ಅದಕ್ಕೆ ಇದೇ ಕಾರಣ. ಈಗ ನೀವು ಏನು ಮಾಡಿದ್ರಲ್ಲ.. ಅದೇ ಕಾರಣ!'' ಎಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net