ಯೂಟ್ಯೂಬರ್ ರಣವೀರ್ ಅಲ್ಲಹಬಾದಿಯಾ ಸೇರಿ 5 ಜನರ ವಿರುದ್ಧ FIR: ಏನಿದು ಪ್ರಕರಣ? | Ranveer Allahabadia

dk - 2025-02-10T221418.171
Published on

Ranveer Allahabadia ಮುಂಬೈ: ಅಶ್ಲೀಲ ಹೇಳಿಕೆಯಿಂದ ಟೀಕೆಗೆ ಗುರಿಯಾದ ಯೂಟ್ಯೂಬರ್ ರಣವೀರ್ ಅಲ್ಲಹಬಾದಿಯಾ(Ranveer Allahbadia) ಮತ್ತು ಹಾಸ್ಯನಟ ಸಮಯ್​ ರೈನಾ ಸೇರಿದಂತೆ ಇತರ ಪ್ರಭಾವಿಗಳ ವಿರುದ್ಧ ಸೋಮವಾರ(ಫೆ.10) ಅಸ್ಸಾಂ ಪೊಲೀಸರು ಪ್ರಕರಣ(FIR) ದಾಖಲಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಯೂಟ್ಯೂಬರ್‌ಗಳು ಮತ್ತು ಪ್ರಭಾವಿಗಳಾದ ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್, ಅಪೂರ್ವ ಮಖಿಜಾ ಮತ್ತು ಇತರರ ವಿರುದ್ಧವೂ ಅಶ್ಲೀಲತೆಯನ್ನು ಪ್ರಚಾರ ಮಾಡಿದ್ದಕ್ಕಾಗಿ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ ಎಂದು ಹೇಳಿದ್ದಾರೆ.

ಏನಿದು ಪ್ರಕರಣ

ಸ್ಟ್ಯಾಂಡ್-ಅಪ್ ಹಾಸ್ಯನಟ ಸಮಯ್ ರೈನಾ ಅವರ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದಲ್ಲಿ ಇತ್ತೀಚೆಗೆ ಯೂಟ್ಯೂಬರ್‌ಗಳಾದ ಆಶಿಶ್ ಚಂಚಲಾನಿ, ಅಪೂರ್ವ ಮುಖಿಜಾ, ರಣವೀರ್ ಅಲ್ಲಹಬಾದಿಯಾ ಕಾಣಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ರಣವೀರ್ ಅಲ್ಲಾಬಾಡಿಯಾ ಅವರು ಪಾಲಕರ ಬಗ್ಗೆ ತುಂಬಾ ಆಕ್ಷೇಪಾರ್ಹವಾದ ಮಾತನ್ನು ಹೇಳಿದರು. ಇದಾದ ನಂತರ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಟೀಕಿಸಲಾಯಿತು. ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಬೇಡಿಕೆಗಳು ಹೆಚ್ಚಾದವು.

ಕ್ಷಮೆಯಾಚಿಸಿದ್ದ ರಣವೀರ್ ಅಲ್ಲಾಬಾಡಿಯಾ

ಅಶ್ಲೀಲ ಹೇಳಿಕೆಯಿಂದ ಟೀಕೆಗೆ ಗುರಿಯಾದ ಯೂಟ್ಯೂಬರ್ ಅಲ್ಲಹಬಾದಿಯಾ ಕ್ಷಮೆಯಾಚಿಸಿದ್ದಾರೆ. ಈ ಕುರಿತು ಸೋಮವಾರ(ಫೆಬ್ರವರಿ 10) ವಿಡಿಯೋವೊಂದನ್ನು ಹಂಚಿಕೊಂಡಿದ್ದು, ''ನಾನು ಇಂಡಿಯಾಸ್ ಗಾಟ್ ಲ್ಯಾಟೆಂಟ್ ನಲ್ಲಿ ಹೇಳಿದ್ದನ್ನು ಹೇಳಬಾರದಿತ್ತು ಎಂಬ ಶೀರ್ಷಿಕೆ ನೀಡಿರುವ ರಣವೀರ್ ಅಲ್ಲಾಬಾಡಿಯಾ ಅವರು ದಯವಿಟ್ಟು ನನ್ನನ್ನು ಕ್ಷಮಿಸಿ. ನನ್ನ ಕಾಮೆಂಟ್ ಸರಿಯಾಗಿರಲಿಲ್ಲ, ತಮಾಷೆಯೂ ಅಲ್ಲ, ನಾನು ಹಾಸ್ಯದಲ್ಲಿ ಪರಿಣಿತನಲ್ಲ. ನಾನು ಕ್ಷಮೆ ಕೇಳುತ್ತಿದ್ದೇನೆ. ನಿಮ್ಮಲ್ಲಿ ಹಲವರು ನನ್ನ ವೇದಿಕೆಯನ್ನು ಈ ರೀತಿ ಬಳಸಲು ಬಯಸುತ್ತೀರಾ ಎಂದು ಕೇಳಿದ್ದೀರಿ? ಇಲ್ಲ, ನಾನು ಅದನ್ನು ಆ ರೀತಿ ಬಳಸಲು ಬಯಸುವುದಿಲ್ಲ. ನಾನು ಹೇಳಿದ್ದಕ್ಕೆ ಯಾವುದೇ ನೆಪ ಹೇಳುವುದಿಲ್ಲ, ನಾನು ಕ್ಷಮೆಯಾಚಿಸುತ್ತೇನೆ'' ಎಂದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net