

ಬೆಂಗಳೂರು: ರಾಜ್ಯ ವಕ್ಪ್ ಬೋರ್ಡ್‌ಗೆ ಸೇರಿದ ಆಸ್ತಿಗಳಲ್ಲಿ ಬಂದ ಬಾಡಿಗೆ ಮತ್ತು ಇನ್ನಿತರ ಆದಾಯವನ್ನು ದುರ್ಬಳಕ್ಕೆ ಮಾಡಿಕೊಂಡ ಆರೋಪದ ಮೇಲೆ ನಿವೃತ್ತ ಡಿಸಿಪಿ ಜಿ.ಎ. ಬಾವಾ ಸೇರಿ ಇತರರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ, ಈ ಕುರಿತು ಹಲಸೂರು ಗೇಟ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಹಜ್ರತ್ ಹಮೀದ್ ಶಾ ಮತ್ತು ಹಜ್ರತ್ ಮುಹಿದ್ ಶಾ ಖಾದ್ರಿ ವಕ್ಪ್ ಇನ್ಟಿಟ್ಯೂಷನ್ ಅಧ್ಯಕ್ಷ, ಆಡಳಿತಾಧಿಕಾರಿ (ನಿವೃತ್ತ ಡಿಸಿಪಿ) ಜಿ.ಎ.ಬಾವಾ, ಜಿಯಾವುಲ್ಲಾ ಶರ್ೀ, ಸೈಯದ್ ರಾಶೀದ್ ಅಹಮ್ಮದ್, ಜಾವೀದ್ ಪಟೇಲ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಜ್ರತ್ ಹಮೀದ್ ಶಾ ಮತ್ತು ಹಜ್ರತ್ ಮುಹಿದ್ ಶಾ ಖಾದ್ರಿ ವಕ್ಪ್ ಇನ್ಟಿಟ್ಯೂಷನ್ ಅಧೀನದಲ್ಲಿ 128 ವಾಣಿಜ್ಯೋದ್ಯಮ ಅಂಗಡಿಗಳು, ಸಹಕಾರಿ ಬ್ಯಾಂಕ್, ಕಾಲೇಜು ಕಟ್ಟಡ, ಪಾರ್ಕಿಂಗ್ ಸ್ಥಳ, ಮಸೀದಿ, ದರ್ಗಾ, ಗುಂಬಸ್‌ಗಳು ಇರುತ್ತವೆ. ವರ್ಷಕ್ಕೆ 1 ಕೋಟಿ ರೂ. ಆದಾಯ ಬರಲಿದೆ. ಇದರಲ್ಲಿ ಶೇ.7 ಸರ್ಕಾರದ ವಕ್ಪ್ ಬೋರ್ಡ್‌ಗೆ ಸಂದಾಯ ಮಾಡಬೇಕಾಗುತ್ತದೆ. ಆದರೆ, ಆರೋಪಿತರು ಸರ್ಕಾರ ಮತ್ತು ವಕ್ಪ್ ಬೋರ್ಡ್‌ಗೆ ವಂಚನೆಗೆ ಮಾಡಿ ದುರ್ಬಳಕ್ಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.