ಕಾಶ್ಮೀರ..ಭಾರತೀಯ ಸೇನೆ ಬಗ್ಗೆ ಅವಹೇಳನ ಮಾಡಿದ್ದ ಜೆಎನ್​ಯು ವಿದ್ಯಾರ್ಥಿ ಸೈಯದ್​ ವಿರುದ್ಧ ಎಫ್​ಐಆರ್​

Syyed
Published on

ನವದೆಹಲಿ: ಸದಾ ಒಂದಿಲ್ಲೊಂದು ವಿವಾದದ ಕೇಂದ್ರಬಿಂದು ಆಗಿರುವ ಜವಾಹರ್​ ಲಾಲ್ ನೆಹರೂ ಯೂನಿವರ್ಸಿಟಿ (ಜೆಎನ್​ಯು) ಈಗ ಮತ್ತೊಂದು ವಿವಾದದ ಮೂಲಕ ಗಮನಸೆಳೆದಿದೆ.

ಕಾಶ್ಮೀರ ಮತ್ತು ಭಾರತೀಯ ಸೇನೆ ವಿರುದ್ಧ ದ್ವೇಷಯುಕ್ತ ಟ್ವೀಟ್​ ಮಾಡಿದ ಜೆಎನ್​ಯು ವಿದ್ಯಾರ್ಥಿಯೋರ್ವನ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಸಜಿದ್​ (ಬಿನ್​ ಸೈಯದ್​) ಎಂಬ ವಿದ್ಯಾರ್ಥಿ ಭಾರತೀಯ ಸೇನೆಯನ್ನು ಅವಹೇಳನ ಮಾಡಿದ್ದಾನೆ. ಕಾಶ್ಮೀರದ ಬಗ್ಗೆಯೂ ಅಸಂಬದ್ಧ ಟ್ವೀಟ್ ಮಾಡಿದ್ದಾನೆ. ಈತ ಕ್ಯಾಂಪಸ್​ ಫ್ರಂಟ್​ ಆಫ್​ ಇಂಡಿಯಾದ ಅಧ್ಯಕ್ಷನೂ ಹೌದು. ಧರ್ಮದ ಆಧಾರದ ಮೇಲೆ ಎರಡು ಸಮುದಾಯಗಳ ಮಧ್ಯೆ ಶತ್ರುತ್ವ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಸೈಯದ್​ ಭಾರತೀಯ ಜನತಾ ಪಾರ್ಟಿ ವಿರುದ್ಧ ಆರೋಪ ಮಾಡಿದ್ದಾರೆ. ಆರ್​ಎಸ್ಎಸ್​ನಿಂದ ರೂಪಿತವಾಗಿ ಭಾರತೀಯ ಸೈನ್ಯ ಕಾಶ್ಮೀರದಲ್ಲಿ ವ್ಯವಸ್ಥಿತವಾಗಿ ನರಮೇಧ ನಡೆಸುತ್ತಿದೆ. ಪ್ರದೇಶಗಳ ಬಗ್ಗೆ ದುರಾಸೆ ಪಡುವುದನ್ನು ಬಿಜೆಪಿ ಸರ್ಕಾರ ನಿಲ್ಲಿಸಬೇಕು. ಕಾಶ್ಮೀರಿಗಳಿಗೆ ವಿಶ್ವಸಂಸ್ಥೆಯೇ ಖಾತರಿ ಪಡಿಸಿರುವ ಸ್ವಯಂ ನಿರ್ಧಾರದ ಹಕ್ಕನ್ನು ಬಿಜೆಪಿ ಸರ್ಕಾರ ಒಪ್ಪಿಕೊಳ್ಳಬೇಕು. ಅಂತಾರಾಷ್ಟ್ರೀಯ ಸಂಸ್ಥೆಗಳ ಮಧ್ಯಪ್ರವೇಶಕ್ಕೆ ಇದು ಸೂಕ್ತ ಸಮಯ ಎಂದು ಸೈಯದ್​ ಟ್ವೀಟ್ ಮಾಡಿದ್ದ. ಇದನ್ನೂ ಓದಿ: ‘ಕರೊನಾ ವಿಚಾರದಲ್ಲಿ ನಮ್ಮ ಬಗ್ಗೆ ಜೋಕ್​ ಮಾಡಿದಿರಲ್ಲ…ನೋಡಿ ಈಗ, ನಿಮಗೇ ಕರೊನಾ ಬಂದಿದೆ…’

ಹಾಗೇ ಇನ್ನೊಂದು ಟ್ವೀಟ್​​ನಲ್ಲಿ ಸೈಯದ್​, ಕಾಶ್ಮೀರ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಮಿಲಟರೀಕರಣಗೊಂಡಿರುವ ಪ್ರದೇಶ. ಆದರೆ ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯೂ ಮಿತಿಮೀರಿದೆ. ಕಾಶ್ಮೀರದಲ್ಲಿ ಸರ್ಕಾರ ಜನಾಂಗೀಯ ಶುದ್ಧೀಕರಣ ಶುರು ಮಾಡಿದೆ. ಆದರೆ ಅದರಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ ಎಂದಿದ್ದ.

ದೆಹಲಿಯ ಕಪಶೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net