ಯೂಟ್ಯೂಬರ್​ಗೆ ಹಿಗ್ಗಾಮುಗ್ಗಾ ಥಳಿತ; ಎಲ್ವಿಶ್ ಸೇರಿದಂತೆ 10 ಮಂದಿ ವಿರುದ್ಧ ದಾಖಲಾಯ್ತು ಎಫ್​ಐಆರ್​!

WhatsApp Image 2024-03-09 at 5.03.54 PM
Published on

ನವದೆಹಲಿ: ಗುರುಗ್ರಾಮ್ ಮೂಲದ ಹೆಸರಾಂತ ಯುಟ್ಯೂಬರ್ ಮ್ಯಾಕ್ಸ್ಟರ್ನ್​​​ಗೆ ಕಪಾಳಮೋಕ್ಷ ಮಾಡಿದ ಬಿಗ್ ಬಾಸ್​ ಒಟಿಟಿ 2 ವಿಜೇತ ಮತ್ತು ಜನಪ್ರಿಯ ಯುಟ್ಯೂಬರ್ ಎಲ್ವಿಶ್ ಯಾದವ್ ಮೇಲೆ ಇದೀಗ ಎಫ್​ಐಆರ್​ ದಾಖಲಾಗಿದೆ. ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲಲ್ಲ. ಇಂತಹದ್ದೇ ಘಟನೆಗಳಲ್ಲಿ ಭಾಗಿಯಾಗಿದ್ದ ಯಾದವ್, ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಈಗ ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿದ ಅನೇಕರು ಇವನನ್ನು ಈ ಕೂಡಲೇ ಬಂಧಿಸಿ ಎಂದು ಆಗ್ರಹಿಸಿದ್ದರು. ಅದರಂತೆಯೇ ಇದೀಗ ಪೊಲೀಸರು ಎಲ್ವಿಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುರುವಾರ ಗುರುಗ್ರಾಮ್ ಮೂಲದ ಯೂಟ್ಯೂಬರ್ ಮ್ಯಾಕ್ಸ್‌ಟರ್ನ್ (ಸಾಗರ್ ಠಾಕೂರ್) ಮೇಲೆ ಎಲ್ವಿಶ್ ಕಪಾಳಮೋಕ್ಷ ಮಾಡುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ಕುರಿತು ಶುಕ್ರವಾರ (ಮಾ.08) ಬೆಳಗ್ಗೆ 1.20ಕ್ಕೆ ಮ್ಯಾಕ್ಸ್‌ಟರ್ನ್ ತನ್ನ ಎಕ್ಸ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ತನ್ನ ವೀಡಿಯೊದಲ್ಲಿ, ಸುಮಾರು 8-10 ಜನರು ಅವರ ಮೇಲೆ ದಾಳಿ ಮಾಡಿ, ಹಲ್ಲೆಗೈದಿದ್ದು, ಕಡೆಯಲ್ಲಿ ಕೊಲ್ಲುವುದಾಗಿ ಕೂಡ ಬೆದರಿಕೆಯೊಡ್ಡಿದ್ದಾರೆ ಎಂದು ಮ್ಯಾಕ್ಸ್‌ಟರ್ನ್ ದೂರಿದ್ದಾರೆ.

ಸಾಗರ್​ ಠಾಕೂರ್​ ಮೇಲೆ ಎಲ್ವಿಶ್ ತನ್ನ ಸಹಚರೊಂದಿಗೆ ಹಲ್ಲೆ ಮಾಡಿದ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮ ಸುತ್ತುವರೆದಿದ್ದು, ನೆಟ್ಟಿಗರು ಎಲ್ವಿಶ್ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಎಲ್ವಿಶ್ ಯಾದವ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಪೊಲೀಸರು ಐಪಿಸಿ ಸೆಕ್ಷನ್ 147, 149, 323, 506 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇಂತಹ ಘಟನೆ ಬೆಳಕಿಗೆ ಬರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ರಾಜಸ್ಥಾನದ ಜೈಪುರದ ರೆಸ್ಟೋರೆಂಟ್‌ನಲ್ಲಿ ಎಲ್ವಿಶ್ ಯಾದವ್ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದ. ಇದೇ ರೀತಿಯಲ್ಲೇ ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದ ವ್ಯಕ್ತಿಗೆ ಹೊಡೆಯುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿತ್ತು ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net