

ಬೆಂಗಳೂರು: ಬೇಸರ ಕಳೆದುಕೊಳ್ಳಲು ಹಾಗೂ ನಿಮ್ಮ ಮೆದುಳು ಮತ್ತು ಕಣ್ಣಿಗೆ ಕೆಲಸ ಕೊಡಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಬೇಸರದಿಂದ ಹೊರಬರಲು ಒಂದು ಆಟವಾಡೋಣ ಬಿನ್ನಿ...
ದೃಷ್ಟಿ ಭ್ರಮೆ ಎಂದರೇನು?: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion) ಎಂದು ಕರೆಯುತ್ತೇವೆ.
ಈ ಚಿತ್ರದಲ್ಲಿ ಸಮೃದ್ಧ ಕಾಡಿನ ವಿಶಾಲವಾದ ಹಸಿರಿನೊಳಗೆ ಸಣ್ಣ ಕಪ್ಪೆಯೊಂದು ಅಡಗಿ ಕುಳಿತುಕೊಂಡಿದೆ. ಅಡಗಿರುವ ಕಪ್ಪೆಯನ್ನು ಗುರುತಿಸಬೇಕು. ಈ ಆಟವನ್ನು ಇನ್ನಷ್ಟು ಥ್ರಿಲ್ಲಿಂಗ್ ಮಾಡಲು ಒಂದು ಟ್ವಿಸ್ಟ್ ಇದೆ. ಪರೀಕ್ಷೆಯನ್ನು ಪೂರ್ಣಗೊಳಿಸಲು ನೀವು ಒಟ್ಟು 9 ಸೆಕೆಂಡುಗಳನ್ನು ಮಾತ್ರ ನೀಡಲಾಗುತ್ತದೆ.
ಇನ್ನೂ ಕಪ್ಪೆಯನ್ನು ಪತ್ತೆಹಚ್ಚಲು ಸಾಧ್ಯವಾಗದವರಿಗೆ ನಾವು ಸಹಾಯ ಮಾಡುತ್ತೇವೆ. ಕಪ್ಪೆ ಹಸಿರು-ಬಣ್ಣವನ್ನು ಹೊಂದಿದೆ ಮತ್ತು ಚಿತ್ರದ ಬಲ ಮೂಲೆಯಲ್ಲಿದೆ. ಈ ಒಂದು ದೃಶ್ಯ ಗಮನಿಸಿ.
ಚಿತ್ರದಲ್ಲಿ ಕಪ್ಪೆಯನ್ನು ಗುರುತಿಸಲು ನಿಮಗೆ ಸಾಧ್ಯವಾಗದಿದ್ದರೆ ಚಿಂತಿಸಬೇಡಿ ಮತ್ತು ನಿಮ್ಮ ಕಣ್ಣುಗಳನ್ನು ದೂಷಿಸಬೇಡಿ, ಚಿತ್ರದಲ್ಲಿ ಅಡಗಿರುವ ಚಿಕ್ಕ ಕಪ್ಪೆಯನ್ನು ಅತ್ಯಂತ ತೀಕ್ಷ್ಣವಾದ ಕಣ್ಣುಗಳನ್ನು ಹೊಂದಿರುವ ಜನರು ಮಾತ್ರ ಗುರುತಿಸಲು ಸಾಧ್ಯವಾಗುತ್ತದೆ.