ಕಾರ್​ ಬೇಡಾ…ಜೆಸಿಬಿ ಏರಿ ದಿಬ್ಬಣ ಹೊರಟ ನವ ದಂಪತಿ

decorated JCB (2)
Published on

ಜಾರ್ಖಂಡ್‌: ಮದುವೆ ಮನೆ ಎಂದರೆ ಸಡಗರ ಸಂಭ್ರಮವಾಗಿದೆ. ವಿವಾಹಕ್ಕೆ ತಯಾರಿ ನಡೆಸುವಾಗ ಕೆಲವು ಪ್ರಮುಖ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಮೂಲಕ ಮದುವೆಯನ್ನು ಜೀವನದುದ್ದಕ್ಕೂ ಸ್ಮರಣೀಯವಾಗಿ ಮಾಡಬಹುದು. ಆದರೆ ಇಲ್ಲೊಂದು ಜೋಡಿ ಮಾತ್ರ ವಿಭಿನ್ನವಾಗಿ ಮದುವೆ ಮೆರವಣಿಗೆ ಬರುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಸಾಮಾನ್ಯವಾಗಿ ಮದವೆ ಮೆರವಣಿಗೆಗಾಗಿ ಕಾರು ಅಥವಾ ಕುದುರೆಯನ್ನು ಬಳಸಲಾಗುತ್ತದೆ. ಆದರೆ ರಾಂಚಿಯಲ್ಲಿ ವರನೊಬ್ಬ ಜೆಸಿಬಿಯಲ್ಲಿ ಮೆರವಣಿಗೆ ಬಂದಿದ್ದಾನೆ. ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು. ವರ ರಾಜಾ ಕೃಷ್ಣ ಮಹತೋ ಮದುವೆ ನಂತರ ಕೂಡಾ ಪತ್ನಿಯನ್ನು ಮನೆಗೆ ಕರೆದೊಯ್ಯಲು ಜೆಸಿಬಿ ಸವಾರಿ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ.

ಜೆಸಿಬಿಯನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿದ್ದು, ಹಾಯಾಗಿ ಕುಳಿತುಕೊಳ್ಳಲು ಹಾಸಿಗೆ, ಕುಶನ್‌ಗಳನ್ನು ಹಾಕಲಾಗಿತ್ತು. ಈ ವಿಶಿಷ್ಟ ಮದುವೆಯ ಮೆರವಣಿಗೆಯನ್ನು ವೀಕ್ಷಿಸಲು ಅಪಾರ ಜನಸ್ತೋಮ ನೆರೆದಿತ್ತು. ವರ, ವಧುವಿನ ಜತೆ ಜೆಸಿಬಿ ಮೇಲೆ ಕುಳಿತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​​ ಆಗಿದೆ.

ವೃತ್ತಿಯಲ್ಲಿ ಹೂವಿನ ವ್ಯಾಪಾರಿಯಾಗಿರುವ ಕೃಷ್ಣ ಮಹತೋ ತಮ್ಮ ಮದುವೆಗೆ ಏನಾದರೂ ವಿಶೇಷವಾಗಿ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದರು. ವೈವಾಹಿಕ ಜೀವನದಲ್ಲಿ ಸ್ವಚ್ಛತೆ ಮತ್ತು ಅಚ್ಚುಕಟ್ಟುತನದ ಮಹತ್ವದ ಸಂದೇಶ ಸಾರಬೇಕು. ಬುಲ್ಡೋಜರ್ ಅಥವಾ ಜೆಸಿಬಿಯನ್ನು ನೋಡಿದಾಗ ಕೆಲವರಿಗೆ ಸ್ವಚ್ಛತೆಯ ನೆನಪಾಗುತ್ತದೆ ಎಂದು ಯೋಚಿಸಿ ಈ ಹೊಸ ಉಪಾಯವನ್ನು ಮಾಡಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net