ಪಿಎಫ್ ಚಂದಾದಾರರಿಗೆ ನೆರವು: ಕೋವಿಡ್​ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಸಹಾಯ

PF
Published on

ನವದೆಹಲಿ: ಕಾರ್ವಿುಕರ ಭವಿಷ್ಯನಿಧಿ (ಇಪಿಎಫ್) ಮತ್ತು ರಾಜ್ಯ ಕಾರ್ವಿುಕರ ಆರೋಗ್ಯ ವಿಮಾ ನಿಗಮದ (ಇಎಸ್​ಐಸಿ) ಚಂದಾದಾರರು ಕೋವಿಡ್​ನಿಂದ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಯೋಜನೆಯಡಿ ಹೆಚ್ಚುವರಿ ನೆರವನ್ನು ಕೇಂದ್ರ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯ ಭಾನುವಾರ ಪ್ರಕಟಿಸಿದೆ.

ಕೋವಿಡ್​ನಿಂದ ಸಾವನ್ನಪ್ಪಿದ ಇಎಸ್​ಐಸಿ ಚಂದಾದಾರರ ಕುಟುಂಬಕ್ಕೆ ಪಿಂಚಣಿ ಮತ್ತು ಇಪಿಎಫ್​ಒ ಚಾಲಿತ ಗುಂಪು ವಿಮೆ ಪಡೆದವರಿಗೆ ಕಲ್ಪಿಸಲಾದ ಕಾರ್ವಿುಕರ ಠೇವಣಿ ಆಧಾರಿತ ವಿಮಾ ಯೋಜನೆ (ಇಡಿಎಲ್​ಐ) ಅಡಿ ಗರಿಷ್ಠ ಪರಿಹಾರ ಮೊತ್ತವನ್ನು 6 ಲಕ್ಷ ರೂ.ನಿಂದ 7 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.

ಇಡಿಎಲ್​ಐನ ಕನಿಷ್ಠ ಪರಿಹಾರ ಮೊತ್ತ 2 ಲಕ್ಷ ರೂ. ಆಗಿರುತ್ತದೆ. ಈ ಸೌಕರ್ಯಕ್ಕಾಗಿ ಚಂದಾದಾರರ ಕುಟುಂಬದವರು ಹೆಚ್ಚಿನ ವೆಚ್ಚ ಅಥವಾ ಶುಲ್ಕ ತೆರಬೇಕಾಗಿಲ್ಲ ಎಂದು ಕಾರ್ವಿುಕ ಸಚಿವಾಲಯ ಸ್ಪಷ್ಟಪಡಿಸಿದೆ. ಚಂದಾದಾರರು ಸಾವನ್ನಪ್ಪಿದರೆ ಅಥವಾ ಗಂಭೀರವಾದ ಗಾಯಕ್ಕೆ ಗುರಿಯಾದರೆ ಕಾರ್ವಿುಕ ಪಡೆಯುತ್ತಿದ್ದ ವೇತನದಲ್ಲಿ ಶೇ. 90ರಷ್ಟನ್ನು ಪಿಂಚಣಿಯನ್ನಾಗಿ ಪಡೆಯಬಹುದು. ಈ ಪಿಂಚಣಿ ಕಾರ್ವಿುಕನ ಪತ್ನಿ ಇಲ್ಲವೆ ತಾಯಿಗೆ ಜೀವಮಾನ ಪೂರ್ತಿ ದೊರೆಯುತ್ತದೆ. ಮಗನಿಗಾದರೆ 25 ವರ್ಷ ತುಂಬು ವವರೆಗೆ ಸಿಗುತ್ತದೆ. ಮಗಳಾಗಿದ್ದರೆ ಆಕೆಗೆ ವಿವಾಹ ಆಗುವವರೆಗೆ ದೊರೆಯುತ್ತದೆ. ಇದು 2020 ಮಾರ್ಚ್ 24ರಿಂದ 2 ವರ್ಷ ಚಾಲನೆಯಲ್ಲಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net