ಕಡೆಗೂ ಕನ್ನಡಿಗರ ಮುಂದೆ ಕ್ಷಮೆಯಾಚಿಸಿದ ಫೋನ್​ಪೇ ಸಿಇಒ ಸಮೀರ್ ನಿಗಮ್!

ವಿಜಯವಾಣಿ (89)
Published on

ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ಸರ್ಕಾರ ಖಾಸಗಿ ಉದ್ಯೋಗ ಕೋಟಾ ಮಸೂದೆಯನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಸಿತ್ತು. ಬಳಿಕ ಇದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಮತ್ತಷ್ಟು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿತ್ತು. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪೋನ್​ ಪೇ ಸಿಇಒ ಸಮೀರ್‌ ನಿಗಮ್‌, ಟ್ವೀಟ್‌ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದರು. ಸಮೀರ್‌ ನಡೆಗೆ ಕನ್ನಡಿಗರು ವ್ಯಾಪಕವಾಗಿ ವಿರೋಧಿಸಿ, ತಕ್ಷಣವೇ ಕ್ಷಮೆಕೋರುವಂತೆ ಒತ್ತಾಯಿಸಿದ್ದರು. ಅದರಂತೆಯೇ ಇದೀಗ ಕಡೆಗೂ ಕನ್ನಡಿಗರ ಮುಂದೆ ಸಮೀರ್ ತಲೆಬಾಗಿದ್ದಾರೆ.

ಅನೇಕ ಕನ್ನಡಿಗರು ಫೋನ್‌ಪೇ ಆ್ಯಪ್​ ಅನ್ನು ಎಲ್ಲರೂ ಅನ್‌ಇನ್‌ಸ್ಟಾಲ್‌ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದೇ ತಡ ಇದೀಗ ಟ್ವೀಟ್​ ಮೂಲಕ ಕನ್ನಡಿಗರಲ್ಲಿ ಸಮೀರ್ ಕ್ಷಮೆಯಾಚಿಸಿದ್ದಾರೆ. ನನ್ನ ಮಾತುಗಳಿಂದ ಯಾರದಾದ್ದರೂ ಮನಸ್ಸಿಗೆ ನೋವುಂಟಾಗಿದ್ದರೇ ಅದಕ್ಕೆ ದಯವಿಟ್ಟು ಕ್ಷಮಿಸಿ. ಕನ್ನಡಿಗರಾಗಲಿ ಅಥವಾ ಕರ್ನಾಟಕ ರಾಜ್ಯಕ್ಕೆ ಆಗಲಿ ಅವಮಾನ ಮಾಡುವ ಉದ್ದೇಶ ನನ್ನದಾಗಿರಲಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net