

ರಾಣೆಬೆನ್ನೂರ: ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಸೋಮವಾರ ಜರುಗಿತು.
ಪ್ರಾಚಾರ್ಯ ಡಾ. ಶಿವಕುಮಾರ ಬಿ. ಕಾರ್ಯಕ್ರಮ ಉದ್ಘಾಟಿಸಿದರು.
ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಬಿ. ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ಬಿ.ಜಿ. ಚಂದ್ರಶೇಖರ, ವಿದ್ಯಾರ್ಥಿ ಸಂಯೋಜಕ ಜಿ.ವಿ. ಶ್ರೀಧರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಸಿ.ಎಂ. ರೇಖಾ ಸ್ವಾಗತಿಸಿದರು. ದರ್ಶನ ಹಾದಿಮನೆ ಮತ್ತು ಶ್ವೇತಾಶ್ರೀ ಹೆಬ್ಬಾರ ನಿರೂಪಿಸಿದರು. ಹಬೀಬಾ ಜೈನಾಬ ವಂದಿಸಿದರು.