

ಬೆಂಗಳೂರು: ಭಾರತೀಯ ಚಿತ್ರೋದ್ಯಮದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡುತ್ತವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದಾಗಿದೆ. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣಲಿದೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಟಾಪ್ ಒಟಿಟಿ ಪ್ಲಾಟ್ಫಾರ್ಮ್ಗಳಾದ ನೆಟ್ಫ್ಲಿಕ್ಸ್, ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್ಸ್ಟಾರ್, ಆಹಾ ಸೇರಿದಂತೆ ಹಲವಾರು ಒಟಿಟಿಯಲ್ಲಿ ಈ ವಾರ ಸಿನಿಪ್ರಿಯರ ನೆಚ್ಚಿನ ಸಿನಿಮಾಗಳು ರಿಲೀಸ್ ಆಗಲಿದ್ದು, ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಮನೆಯಲ್ಲೇ ಕುಳಿತು ನೋಡಬಹುದಾಗಿದೆ. ಹಾಗಾದ್ರೆ, ಈ ವಾರ ತೆರೆಕಾಣುತ್ತಿರುವ ಸಿನಿಮಾಗಳ ಪಟ್ಟಿ ಹೀಗಿದೆ ನೋಡಿ.
ಕಲ್ಕಿ 2898 ಎಡಿ (ತೆಲುಗು): ಅಮೆಜಾನ್ ಪ್ರೈಮ್ (ಆ.22)
ರಾಯನ್ (ತಮಿಳು): ನೆಟ್ಫ್ಲಿಕ್ಸ್ (ಆ.23)
ಅಬಿಗೈಲ್ (ಇಂಗ್ಲಿಷ್): ಜಿಯೋ ಸಿನಿಮಾ (ಆ.26)
ಇನ್ಕಮಿಂಗ್ (ಇಂಗ್ಲಿಷ್): ನೆಟ್ಫ್ಲಿಕ್ಸ್ (ಆ.23)
ನೀ ಪತಿ ನಾ ಪತಿ (ತಮಿಳು): ಜೀ5 (ಆ.19)